ನೀರಾವರಿ, ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ
ವರದಿ-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲ್ಲೂಕಿನ ಪ್ರತಿಯೊಂದು ಹಳ್ಳಿಗಳಿಗೂ ಹಲವಾರು ಬಾರಿ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸುವುದರ ಜತೆಗೆ ಇಡೀ ತಾಲ್ಲೂಕಿನ ಮೂಲಭೂತ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಮದ್ದೂರು ಮಾದರಿ ಕ್ಷೇತ್ರವನ್ನಾಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಶಾಸಕ ಡಿ.ಸಿ.ತಮ್ಮಣ್ಣ ಹೇಳಿದರು.
ತಾಲೂಕಿನ ಭಾರತಿನಗರ ಸಮೀಪದ ಎಸ್‍ವಿಎಸ್ ಸಮುದಾಯ ಭವನದಲ್ಲಿ ಸಿಎ ಕೆರೆ ಹೋಬಳಿಯ ಜನಸಂಪರ್ಕ ಸಭೆಯ ಪೂರ್ವಭಾವಿ ಸಭೆಯನ್ನು ಉದ್ಘಾಟಿಸಿ ಮಾತನಾ ಡಿದರು.
ನಾನು ಕೇವಲ ಜನಸೇವೆಯನ್ನು ಮಾಡಲು ಮದ್ದೂರು ಕ್ಷೇತ್ರಕ್ಕೆ ಬಂದಿದ್ದೇನೆ,
ಶೈಕ್ಷಣಿಕವಾಗಿ ಇಲ್ಲಿ ಬಹಳಷ್ಟು ಅಭಿವೃದ್ಧಿಯಾಗಿದೆ. ಗ್ರಾಮೀಣ ಪ್ರದೇಶದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚು ಒತ್ತು ನೀಡಿ, ಹೆಚ್ಚು ಸರ್ಕಾರಿ ಶಾಲೆಗಳು, ಪದವಿಪೂರ್ವ ಕಾಲೇಜು ಹಾಗೂ ಪ್ರಥಮ ದರ್ಜೆ ಕಾಲೇಜುಗಳನ್ನು ನಿರ್ಮಾಣ ಮಾಡಲು ಕ್ರಮವಹಿಸಿದ್ದೇನೆ.
ತಾಲೂಕಿನ ಯುವ ಸಮೂಹ ಹೆಚ್ಚಿನ ವಿದ್ಯಾಭ್ಯಾಸ ಹಾಗೂ ಉದ್ಯೋಗ ಪಡೆಯಲು ವಿದೇಶಕ್ಕೆ ತೆರಳಲು ಅನುಕೂಲವಾಗುವಂತೆ ಮದ್ದೂರು ಪಟ್ಟಣದಲ್ಲಿಯೇ ಪಾಸ್‍ಪೋರ್ಟ್ ಕೇಂದ್ರವನ್ನು ಪ್ರಾರಂಭಿಸಿದ್ದೇನೆ ಎಂದರು.
ಅಲ್ಲದೇ ಇಡೀ ಕ್ಷೇತ್ರವನ್ನು ನೀರಾವರಿ ಮಾಡಲು ಆತಗೂರು ಹೋಬಳಿಯ ಕೆರೆ ಕಟ್ಟೆಗಳನ್ನು ಏತ ನೀರಾವರಿ ಯೋಜನೆಗಳ ಮೂಲಕ ತುಂಬಿಸಿದ್ದೇನೆ. ಚೆನ್ನಯ್ಯ ನಾಲೆಗಳ ನಿರ್ಮಾಣಕ್ಕಾಗಿ 75 ಕೋಟಿ ವೆಚ್ಚದಲ್ಲಿ ಹೆಬ್ಬಾಳದಿಂದ ಏತ ನೀರಾವರಿ ಯೋಜನೆ ಮೂಲಕ ತಾಲೂಕಿನ ಕೊನೆಯ ಭಾಗದ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಿಟ್ಟಮೇಲನಹಳ್ಳಿ ಏತ ನೀರಾವರಿ ಯೋಜನೆ, ಕ್ಯಾತಘಟ್ಟ ಏತ ನೀರಾವರಿ ಯೋಜನೆಗಳನ್ನು ರೂಪಿಸಿ ರೈತರ ಕಲ್ಯಾಣಕ್ಕಾಗಿ ಶ್ರಮಿಸಿದ್ದೇನೆ ಎಂದು ವಿವರಿಸಿದರು.
ಮದ್ದೂರು ತಾಲೋಕಿನ ಪ್ರಮುಖ ಎರಡು ಕೆರೆಗಳಾದ ಮದ್ದೂರಮ್ಮನ ಕೆರೆಯ ಅಭಿವೃದ್ಧಿಗೆ 120 ಕೋಟಿ, ಸೂಳೇಕೆರೆ ಕೆರೆ ಅಭಿವೃದ್ಧಿಗೆ 100 ಕೋಟಿ ರೊ,ಗಳನ್ನು ಶೀಘ್ರದಲ್ಲೇ ತಂದು ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು. ಅಲ್ಲದೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯತ್ ಸದಸ್ಯರ ಎಂಟು ಕೋಟಿ ಅನುದಾನವನ್ನು ಮದ್ದೂರು ತಾಲೋಕಿನ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಮಿಸಲಿಡಲಾಗಿದೆ ಎಂದರು.
ಜೆಡಿಎಸ್ ತಾಲೋಕು ಅಧ್ಯಕ್ಷ ಚಿಕ್ಕ ತಿಮ್ಮೇಗೌಡ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಹೊನ್ನೇಗೌಡ, ಮುಖಂಡರಾದ ಮಾದನಾಯಕನಹಳ್ಳಿ ರಾಜಣ್ಣ, ನಗರಕೆರೆ ಸಂದೀಪ್, ಗುರುದೇವರಹಳ್ಳಿ ಅರವಿಂದ್, ಆಸರೆ ರಘು ವೆಂಕಟೆಗೌಡ, ದೇವರಹಳ್ಳಿ ವೆಂಕಟೇಶ್, ದಯಾನಂದ, ದಲಿತ ಮುಖಂಡರಾದ ಚಿಕ್ಕರಸಿನಕೆರೆ ಮೂರ್ತಿ, ಕರಡಕೆರೆ ಯೋಗೇಶ್, ಮಹಿಳಾ ಮುಖಂಡರಾದ ದೇವಿರಮ್ಮ, ವಸಂತಮ್ಮ ಮುಂತಾದದವ್ರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು