ಮೈಸೂರು ದಸರಾ : ಜನದಟ್ಟಣೆ ತಪ್ಪಿಸಲು
ಪೊಲೀಸರ ಸೂಚನೆ ಪಾಲಿಸುವಂತೆ ಆಯುಕ್ತರ ಮನವಿ
ಮೈಸೂರು : ನಾಡಹಬ್ಬ ಮೈಸೂರು ದಸರಾ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ಕಾರಣ ಜನ ದಟ್ಟಣೆ ತಪ್ಪಿಸಲು ಪೊಲೀಸ್ ಆಯುಕ್ತರು ಕೆಳಕಂಡಂತೆ ಸೂಚನೆ ನೀಡಿದ್ದಾರೆ.
ದಸರಾ ಮೆರವಣಿಗೆ ವೀಕ್ಷಣೆಯ ಪಾಸ್ ಹೊಂದಿರುವವರಿಗೆ 12.15ಕ್ಕೆ ಪ್ರವೇಶ ದ್ವಾರಗಳು ತೆರೆಯುತ್ತವೆ. ಜತೆಗೆ ಟಾರ್ಚ್ ಲೈಟ್ ಪೆರೆಡ್ ಪ್ರವೇಶ ದ್ವಾರಗಳು ಸಂಜೆ 5 ಗಂಟೆಗೆ ತೆರೆಯುತ್ತವೆ ಎಂದು ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದು, ಸಾರ್ವಜನಿಕರು ಪೊಲೀಸರ ಸೂಚನೆಗಳನ್ನು ಪಾಲಿಸಿ ಜನದಟ್ಟಣೆ ನಿಯಂತ್ರಣಕ್ಕೆ ಸಹಕಾರ ನೀಡಬೇಕೆಂದು ಕೋರಿದ್ದಾರೆ.
0 ಕಾಮೆಂಟ್‌ಗಳು