ವರದಿ-ನಜೀರ್ ಅಹಮದ್, ಮೈಸೂರು
ಮೈಸೂರು ; ರಾಹುಲ್ ಗಾಂಧಿಯವರ ಪ್ರತಿಷ್ಠಿತ ಭಾರತ್ ಜೋಡೋ ಪಾದಯಾತ್ರೆಯ ಯಶಸ್ಸಿಗೆ ಆಶೀರ್ವಾದ ಮಾಡುವುದರ ಜತೆಗೆ ಬೆಂಬಲ ನೀಡುವಂತೆ ಶಾಸಕ, ಮಾಜಿ ಸಚಿವ ತನ್ವೀರ್ ಸೇಠ್ ಶನಿವಾರ ಮೈಸೂರಿನ ಉರಿಲಿಂಗಿ ಪೆದ್ದಿಮಠದ ಶ್ರೀ ಜ್ಞಾನ ಪ್ರಕಾಶ್ ಸ್ವಾಮೀಜಿ ಅವರನ್ನು ಕೋರಿದರು.
ಅಕ್ಟೋಬರ್ 3 ರಂದು ರಾಹುಲ್ ಗಾಂಧಿಯವರ ಪಾದಯಾತ್ರೆ ಮೈಸೂರಿಗೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಎನ್,ಆರ್,ಕ್ಷೇತ್ರದಿಂದ ಸಾವಿರಾರು ಜನರು ಪಾದಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ, ಹಾಡಿರ್ಂಜ್ ವೃತ್ತದ ಮೂಲಕ ಮೈಸೂರು ನಗರ ಪ್ರವೇಶಿಸುವ ಪಾದಯಾತ್ರೆ ಅಶೋಕ ರಸ್ತೆ, ಫೌಂಟನ್ ಸರ್ಕಲ್, ಟಿಪ್ಪು ಸರ್ಕಲ್ ಎಲ್‍ಐಸಿ ಸರ್ಕಲ್ ಮೂಲಕ ರಿಂಗ್ ರಸ್ತೆಯ ಮಣಿಪಾಲ್ ಆಸ್ಪತ್ರೆ ಮುಂಭಾಗದಿಂದ ಮೈಸೂರು ಜಿಲ್ಲೆಯ ಗಡಿ ದಾಟಿ ಮಂಡ್ಯ ಜಿಲ್ಲೆಗೆ ಪಾದಯಾತ್ರೆ ತೆರಳಲಿದೆ ಈ ವೇಳೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಅವರು ಕೋರಿದರು.
ಭಾರತ್ ಜೋಡೋ ಪಾದಯಾತ್ರೆ ಮೈಸೂರಿನಲ್ಲಿ ಯಶಸ್ವಿಗೊಳಿಸಲು ಶಾಸಕ ತನ್ವೀರ್ ಸೇಠ್ ವಿವಿಧ ಧಾರ್ಮಿಕ ಮುಖಂಡರನ್ನು ಭೇಟಿ ಮಾಡಿ ಬೆಂಬಲ ಕೋರುತ್ತಿರುವುದನ್ನು ಇಲ್ಲಿ ಗಮನಿಸಬಹುದು.
0 ಕಾಮೆಂಟ್‌ಗಳು