ಯೂರಿಯ ಹೆಚ್ಚಿನ ಬೆಲೆಗೆ ಮಾರುತ್ತಿದ್ದನ್ನು ಪ್ರಶ್ನಿಸಿದ ರೈತ ಮುಖಂಡರ ಮೇಲೆ ಹಲ್ಲೆ ನಡೆಸಿದ ಅಣ್ಣಯ್ಯ ಉ. ರಾಮಕೃಷ್ಣ ವಿರುದ್ಧ ಹೋರಾಟ
ಮೈಸೂರು : ಯೂರಿಯಾ ಹೆಚ್ಚಿನ ಬೆಲೆಗೆ ಮಾರುತ್ತಿದ್ದನ್ನು ಪ್ರಶ್ನಿಸಿದ ರೈತ ಮುಖಂಡರ ಮೇಲೆ ಹಲ್ಲೆ ನಡೆಸಿದ ಹುಣಸೂರು ತಾಲ್ಲೂಕು ಹೊಸೂರಿನ ಮೇಘ ಟ್ರೇಡರ್ಸ್ ಮಾಲಿಕ ಅಣ್ಣಯ್ಯ ಉ.ರಾಮಕೃಷ್ಣ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.
ನಗರದ ಜಲದರ್ಶಿನಿ ಅತಿಥಿಗೃಹ ಸಭಾಂಗಣದಲ್ಲಿ ನಡೆದ ರೈತ ಮುಖಂಡರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಹೊಸೂರಿನ ಮೇಘ ಟ್ರೇಡರ್ಸ್ ಮಾಲಿಕ ಅಣ್ಣಯ್ಯ ಉ.ರಾಮಕೃಷ್ಣ ಯೂರಿಯಾ ಗೊಬ್ಬರವನ್ನು ನಿಗದಿತ ಬೆಲೆಗಿಂತ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಆರೋಪಿಸಿರುವ ರೈತ ಮುಖಂಡರು ಅಕ್ಟೋಬರ್, 11 ರಂದು ಈ ಬಗ್ಗೆ ಅಲ್ಲಿನ ರೈತಮುಖಂಡರು ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ರಾಮಕೃಷ್ಣ ತನ್ನ ಬೆಂಬಲಿಗರಿಂದ ರೈತ ಮುಖಂಡರ ಮೇಲೆ ಹಲ್ಲೆ ನಡೆಸಿದ್ದನು ಎಂದು ಆರೋಪಿಸಿರುವ ಮುಖಂಡರು. ಈ ಬಗ್ಗೆ ಕೃಷಿ ಇಲಾಖೆ ಮತ್ತು ಪೊಲೀಸರಿಗೆ ದೂರು ನೀಡಿದ್ದರೂ ಆತನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ. ಇದರಿಂದ ಪ್ರತಿಭಟನೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ಸಭೆಯಲ್ಲಿ ಹಿರಿಯ ರೈತ ಮುಖಂಡರಾದ ಅಶ್ವತ್ ನಾರಾಯಣ ರಾಜ ಅರಸು, ಜಿಲ್ಲಾಧ್ಯಕ್ಷರಾದ ಹೊಸೂರ್ ಕುಮಾರ್, ಹೊಸಕೋಟೆ ಬಸವರಾಜು, ಮಹಿಳಾ ಜಿಲ್ಲಾಧ್ಯಕ್ಷರಾದ ನೇತ್ರಾವತಿ, ಪ್ರಸನ್ನ ಎನ್.ಗೌಡ, ಪಿ.ಮರಂಕಯ್ಯ, ಆನಂದೂರು ಪ್ರಭಾಕರ್, ಮಹಾದೇವ ನಾಯಕ, ಕರೋಟಿ ಕುಮಾರಸ್ವಾಮಿ, ಶೇಖರ್, ಮಲ್ಲೇಶ್, ಬಸವರಾಜುಗೌಡ, ಮಹಾದೇವ, ಹೆಜ್ಜಿಗೆ ಪ್ರಕಾಶ್, ಹತ್ತಳ್ಳಿ ಶಿವನಂಜು, ಚಂದ್ರಶೇಖರ್, ರಾಘವೇಂದ್ರ ಇತರರು ಭಾಗವಹಿಸಿದ್ದರು.
0 ಕಾಮೆಂಟ್‌ಗಳು