ಕಾಲು ಜಾರಿ ಕಾವೇರಿ ನದಿಯಲ್ಲಿ ಕೊಚ್ಚಿ ಹೋದ ರೈತ

ಚಿಕ್ಕರಸಿನಕೆರೆ ಗ್ರಾಮದ ಆನಂದ ಮೃತ ದುರ್ದೈವಿ

ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ಹೊಲದಲ್ಲಿ ಕೆಲಸ ಮುಗಿಸಿ ಕೈಕಾಲು ತೊಳೆಯಲು ನದಿಗೆ ಇಳಿದಿದ್ದ ರೈತನೊಬ್ಬ ಕಾಲುಜಾರಿ ಕೊಚ್ಚಿಹೋದ ಘಟನೆ ಮದ್ದೂರು ತಾಲೋಕಿನ ಚಿಕ್ಕರಸಿನಕೆರೆ ಶ್ರೀ ಕಾಲ ಭೈರವೇಶ್ವರ ದೇವಾಲಯದ ಬಳಿ ಹರಿಯುವ ಕಾವೇರಿ ನದಿ ದಡದಲ್ಲಿ ನಡೆದಿದೆ.

ಚಿಕ್ಕರಸಿನಕೆರೆ ಗ್ರಾಮದ ಆನಂದ (36) ನದಿಯಲ್ಲಿ ಕೊಚ್ಚಿ ಹೋದ ದುರ್ದೈವಿ ರೈತ.
ಈತ ಮಂಗಳವಾರ ಬೆಳಿಗ್ಗೆ ಹೊಲದಲ್ಲಿ ಕೆಲಸ ಮುಗಿಸಿ ಕೈ ಕಾಲು ತೊಳೆಯಲು ನದಿಗೆ ಇಳಿದಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ನದಿಯಲ್ಲಿ ಕೊಚ್ಚಿ ಹೋಗಿರುತ್ತಾನೆ ಎನ್ನಲಾಗಿದೆ.
ಮಳೆಯ ಆರ್ಭಟದಿಂದ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಹರಿಯುತಿದ್ದರಿಂದ ಯುವಕ ನೀರು ಪಾಲಾಗಿದ್ದು, ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ದೇಹದ ಶೋಧನೆ ನಡೆಸಲಾಗುತ್ತಿದೆ. 
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು