ಸಾರ್ವಜನಿಕರಿಂದ 2 ಕೋಟಿ ರೂ. ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿಸಿ ವಂಚಿಸಿದ್ದ ಆರೋಪಿ ಬಂಧನ

ಹಿಮಾಲಯ ಕಾಮೋಡಿಟೀಸ್, ಗುಡ್‍ವಿಲ್ ವೆಲ್ತ್ ಮ್ಯಾನೇಜ್‍ಮೆಂಟ್, ಗುಡ್‍ವಿಲ್ ಕಾಂ ಟ್ರೇಡ್ಸ್ ಕಂಪನಿಗಳ ಮೂಲಕ ಷೇರು ಖರೀದಿಸಿದ್ದ ಸಾರ್ವಜನಿಕರು ಪೊಲೀಸರನ್ನು ಸಂಪರ್ಕಿಸುಂತೆ ಮನವಿ

ಮೈಸೂರು : ಹಿಮಾಲಯ ಕಾಮೋಡಿಟೀಸ್, ಗುಡ್‍ವಿಲ್ ವೆಲ್ತ್ ಮ್ಯಾನೇಜ್‍ಮೆಂಟ್, ಗುಡ್‍ವಿಲ್ ಕಾಂ ಟ್ರೇಡ್ಸ್ ಕಂಪನಿಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಿರುವವರು ಕೂಡಲೇ ಸೆನ್ ಕ್ರೈಂ ಪೊಲೀಸ್ ಠಾಣೆಗೆ ದಾಖಲಾತಿಗಳೊಂದಿಗೆ ಹಾಜರಾಗಬೇಕೆಂದು ಸೆನ್ ಕ್ರೈಂ ಪೊಲೀಸರು ಕೋರಿದ್ದಾರೆ. 
ನಗರದ ಜಿ.ಎನ್. ಕೃಷ್ಣಮೂರ್ತಿ, ಮನೆ ನಂ 04, 6 ನೇ ಬ್ಲಾಕ್, ಆದಿತ್ಯ ಸರ್ಕಲ್ ಹತ್ತಿರ, ವಿಶ್ವಮಾನವ ಜೋಡಿ ರಸ್ತೆ, ಸೋಮನಾಥನಗರ, ದಟ್ಟಗಳ್ಳಿ, ಮೈಸೂರು ಹಾಗೂ ಆತನ ಪತ್ನಿ ಡಯಾನ ಮನೆ ನಂ 7723, 2 ನೇ ಫೇಸ್, 4ನೇ ಹಂತ, ವಿಜಯನಗರ, ಮೈಸೂರು ಎಂಬುವವರು ಷೇರು ಮಾರುಕಟ್ಟೆಯಲ್ಲಿ ಸಾರ್ವಜನಿಕರಿಂದ ಹಣ ಹೂಡಿಕೆ ಮಾಡಿಸಿ ಹೆಚ್ಚಿನ ಲಾಂಭಂಶವನ್ನು ನೀಡುವುದಾಗಿ ತಿಳಿಸಿ 2014 ರಿಂದ 2021ರ ವರೆಗೆ ಸುಮಾರು ರೂ. 2,14,84,500 ಗಳನ್ನು ಪಡೆದು, ಲಾಂಭಶವನ್ನು ನೀಡದೇ ಹಾಗೂ ಹೂಡಿಕೆ ಹಣವನ್ನು ವಾಪಸ್ ನೀಡದೇ ಮೋಸ ಮಾಡಿರುವ ಬಗ್ಗೆ ಮೈಸೂರು ನಗರ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಪ್ರಕರಣದ ತನಿಖಾ ವೇಳೆ ಆರೋಪಿ ಜಿ.ಎನ್. ಕೃಷ್ಣಮೂರ್ತಿ ರವರನ್ನು ದಿನಾಂಕ: 13/10/2022 ರಂದು ದಸ್ತಗಿರಿ ಮಾಡಿ ವಿಚಾರಣೆ ಮಾಡಲಾಗಿ, ಈತನು ಇತರೇ ಆರೋಪಿಗಳಾದ ಲಕ್ಷ್ಮೀಶ ಹಾಗೂ ರಘುಕುಮಾರ್ ಎಂಬುವವರ ಜೊತೆ ಸೇರಿಕೊಂಡು ಹಿಮಾಲಯ ಕಮೋಡಿಟೀಸ್, ಗುಡ್‍ವಿಲ್ ವೆಲ್ತ್ ಮೇನೆಜ್‍ಮೆಂಟ್, ಗುಡ್‍ವಿಲ್ ಕಾಂ ಟ್ರೇಡ್ಸ್ ಎಂಬ
ಕಂಪನಿಗಳನ್ನು ವಿವಿಧ ಸ್ಥಳಗಳಲ್ಲಿ ತೆರೆದು ಈ ಕಂಪನಿಗಳ ಮೂಲಕ ಸಾರ್ವಜನಿಕರಿಂದ ಕೋಟ್ಯಾಂತರ ರೂಪಾಯಿಗಳನ್ನು ಹೂಡಿಕೆ ಮಾಡಿಸಿಕೊಂಡು ಮೋಸ ಮಾಡಿರುವುದು ತಿಳಿದು ಬಂದಿರುತ್ತದೆ.
 ಆದ್ದರಿಂದ ಮೇಲ್ಕಂಡ ವ್ಯಕ್ತಿಗಳು ಮತ್ತು ಕಂಪನಿಗಳ ಮೇಲೆ ಹಣ ಹೂಡಿಕೆ ಮಾಡಿ ಮೋಸ ಹೋಗಿರುವ ಸಾರ್ವಜನಿಕರು ಅವಶ್ಯಕ ದಾಖಲಾತಿಗಳೊಂದಿಗೆ ಮೈಸೂರು ನಗರ ಸೆನ್ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ರವರನ್ನು ಸಂಪರ್ಕಿಸಬೇಕೆಂದು ಕೋರಲಾಗಿದೆ.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು