ವರದಿ-ಕೆ.ಎಸ್.ಪ್ರಕಾಶ್, ಪಿರಿಯಾಪಟ್ಟಣ
ಪಿರಿಯಾಪಟ್ಟಣ : ರೈತರು ಆರ್ಥಿಕವಾಗಿ ಸದೃಢರಾಗಲು ಸಹಕಾರ ಸಂಘಗಳು ಸಹಕಾರಿಯಾಗಿವೆ ಎಂದು ಅಧ್ಯಕ್ಷ ಟಿ.ಎಲ್.ಅರವಿಂದರಾಜೇ ಅರಸ್ ತಿಳಿಸಿದರು.
ತಾಲೂಕಿನ ಬೆಟ್ಟದತುಂಗ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಘದ ಆರ್ಥಿಕ ಅಭಿವೃದ್ಧಿಗೆ ಪ್ರತಿಯೊಬ್ಬ ಸಹಕಾರಿಗಳ ಸಹಕಾರ ಅತ್ಯಗತ್ಯವಾಗಿದ್ದು, ಸಂಘದಲ್ಲಿ ತೆಗೆದುಕೊಂಡ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡುವುದರ ಮೂಲಕ ಸಂಘದ ಬೆಳವಣಿಗೆಗೆ ಪ್ರತಿಯೊಬ್ಬರು ಸಹಕರಿಸಬೇಕು ಎಂದರು.
ರೈತರ ಉಪಯೋಗಕ್ಕಾಗಿ ಸಹಕಾರಿ ಸಂಸ್ಥೆಯು ಅತ್ಯುನ್ನತ ಯೋಜನೆಗಳನ್ನು ಜಾರಿಗೊಳಿಸಿವೆ. ಪ್ರತಿಯೊಬ್ಬ ರೈತರು ಇವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.
ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಿ.ಎಸ್.ರಾಮಕೃಷ್ಣ ಮಾತನಾಡಿ, ಸಂಘವು ಪ್ರಸ್ತುತ ೧,೬೬,೪೭೩ ಲಕ್ಷ ರೂಗಳ ನಿವ್ವಳ ಲಾಭವನ್ನು ಹೊಂದಿದ್ದು, ಇದರಲ್ಲಿ ವ್ಯಾಪಾರ ಲಾಭವು ೪,೨೪,೪೬೩ ಆಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ಚೆಲುವಯ್ಯ ನಿರ್ದೇಶಕ ಕೃಷ್ಣ ಅರಸ್, ಪ್ರಭುಗೌಡ, ಟಿ.ಎಂ. ವಿಜಯ್ ದೇವರಾಜೇಅರಸ್, ಮರೀಗೌಡ, ಹುಚ್ಚೇಗೌಡ, ಬಲರಾಮೇಗೌಡ, ಈರಪ್ಪ, ದೇವರಾಜ ನಾಯಕ, ಜಯಲಕ್ಷ್ಮಮ್ಮಣಿ, ಗೌರಮ್ಮ, ಮುಖಂಡರಾದ ಮಲ್ಲಿಕಾರ್ಜುನ, ಪ್ರಕಾಶ್ ರಾಜೇಅರಸ್, ಬಾಲರಾಜೇರಸ್, ಸಹಾಯಕ ಚೇತನ್ ಸೇರಿದಂತೆ ಮತ್ತಿತರರು ಹಾಜರಿದ್ದರು.
0 ಕಾಮೆಂಟ್‌ಗಳು