ಹನೂರು : ಮೂರು ದಿನದಲ್ಲಿ ಅಂಗಡಿ ತೆರವಿಗೆ ಸೂಚನೆ

ವರದಿ-ಶಾರೂಖ್ ಖಾನ್, ಹನೂರು

ಹನೂರು : ಮೂರು ದಿನದ ಒಳಗೆ ಹನೂರು ಪಟ್ಟಣದ ರಸ್ತೆ ಬದಿಯ ಅಂಗಡಿಗಳನ್ನು ತೆರವುಗೊಳಿಸುವಂತೆ ತಹಸಿಲ್ದಾರ್ ನೇತತ್ವದ ಅಧಿಕಾರಿಗಳ ತಂಡ ಮಾಲಿಕರಿಗೆ ಖಡಕ್ ಸೂಚನೆ ನೀಡಿದ್ದಾರೆ.  ಕೊಳ್ಳೇಗಾಲದಿಂದ ಹನೂರು ಪಟ್ಟಣದವರೆಗೆ ಕೆಶಿಪ್ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು, ಹನೂರು ಪಟ್ಟಣ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ರಸ್ತೆ ಬದಿಯ ಕೆಲ ವ್ಯಾಪಾರಸ್ಥರು ಅಂಗಡಿಗಳನ್ನು ತೆರವು ಮಾಡದ ಹಿನ್ನೆಲೆಯಲ್ಲಿ ಶುಕ್ರವಾರದಂದು ತಹಸಿಲ್ದಾರ್ ಆನಂದಯ್ಯ ಸೇರಿದಂತೆ ವಿವಿಧ ಅಧಿಕಾರಿಗಳ ತಂಡ ಸ್ಥಳಕ್ಕೆ ದೌಡಾಯಿಸಿ ಅಂಗಡಿ ಮಾಲಿಕರಿಗೆ ಖಡಕ್ ಸೂಚನೆಯನ್ನು ನೀಡಿದ್ದಾರೆ.  ಇದೇ ವೇಳೆ ಅಧಿಕಾರಿಗಳು ಮತ್ತು ಅಂಗಡಿ ಮಾಲೀಕರ ನಡುವೆ ಕೆಲಕಾಲ ವಾಗ್ವಾದ ಸಹ ನಡೆಯಿತು. ದಿಢೀರನೆ ಬಂದು ಮೂರು ದಿನದ ಒಳಗೆ ಅಂಗಡಿಗಳನ್ನು ತೆರವುಗೊಳಿಸಿ ಎಂದರೆ ನಾವು ಏನು ಮಾಡುವುದು. ಮತ್ತಷ್ಟು ಕಾಲಾವಕಾಶ ನೀಡಿ ಎಂದು ಅಂಗಡಿಯವರು ತಮ್ಮ ಅಳಲು ತೋಡಿಕೊಂಡರು. ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಪರಶಿವಯ್ಯ, ಗ್ರಾಮ ಲೆಕ್ಕಾಧಿಕಾರಿ ಶೇಷಣ್ಣ, ಕೆಶಿಪ್ ಅಭಿವೃದ್ಧಿ ಅಧಿಕಾರಿಗಳು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು