ಸೋಮವಾರಪೇಟೆ : ಮೈಸೂರಿನ ಪ್ರತಿಷ್ಠಿತ ಓಡಿಪಿ ಸಂಸ್ಥೆಯಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಪಂಚಾಯತಿ ಸಭಾಂಗಣದಲ್ಲಿ ಮೈಸೂರಿನ ಸಂತ ಜೋಸೆಫರ ಆಸ್ಪತ್ರೆ, ಕಾರಿತಸ್ ಇಂಡಿಯಾ, ಮೈಸೂರು ಸಂಘಮಿತ್ರ ಹಾಗೂ ಹಾನಗಲ್ಲು ಗ್ರಾಮ ಪಂಚಾಯತಿ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.ಓಡಿಪಿ ಪ್ರಾಯೋಜಿತ ಪ್ರಕೃತಿ ರೈತ ಉತ್ಪಾದಕರ ಕೂಟ ಏರ್ಪಡಿಸಿದ್ದ ಈ ಆರೋಗ್ಯ ತಪಾಸಣಾ ಶಿಬಿರವನ್ನು ಹಾನಗಲ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಲಕ್ಷ್ಮಿ ಪಾಂಡ್ಯ ಅವರು ಉದ್ಘಾಟಿಸಿದರು.ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಸ್ಮ, ಉಪಾಧ್ಯಕ್ಷರಾದ ಮಿಥುನ್,ಓಡಿಪಿ ಸಂಯೋಜಕರಾದ ಜಾನ್ ರೊಡ್ರಿಗಸ್ ಮತ್ತು ರುಡಾಲ್ಫ್, ಡಾ. ನಿತಿನ್ ರಾಜ್ ಅವರು ಸಾಮಾನ್ಯ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಸಣ್ಣದಾಗಿ ಬರುವ ಶೀತ ಕೆಮ್ಮು, ಜ್ವರ, ಬಿಪಿ, ಶುಗರ್, ತಲೆ ಸುತ್ತು ಮತ್ತು ತಲೆ ನೋವುಗಳ ಬಗ್ಗೆ ಎಚ್ಚರ ವಹಿಸಿ ಕೂಡಲೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಲಾಯಿತು. ಸಂತ ಜೋಸೆಫ್ ಆಸ್ಪತ್ರೆಯ ಆದಿತ್ಯ ಮತ್ತು ಹೆಲೆನ್ ಸಾಮಾನ್ಯ ಖಾಯಿಲೆಗಳ ತಪಾಸಣೆ ನಿತಿನ್ ರಾಜ್, ದಂತ ತಪಾಸಣೆ ಮಾಡಿದರು.
ಶಿಬಿರದಲ್ಲಿ 120 ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಜತೆಗೆ ಉಚಿತ ವೈದ್ಯಕೀಯ ಸಲಹೆ ಮತ್ತು ಅಗತ್ಯ ಔಷಧಿಗಳನ್ನು ನೀಡಲಾಯಿತು.ರುಡಾಲ್ಫ್ ಡೆಸಾ, ರೋಜಾಮೇರಿ, ಸಂಧ್ಯಾ, ಸಿಬ್ಬಂದಿಗಳಾದ ಮಮತಾ, ಪುನೀತ್, ಪ್ರಕೃತಿ ರೈತ ಸಮಿತಿಯ ಅಧ್ಯಕ್ಷರಾದ ರಾಜು ಪೊನ್ನಪ್ಪ, ಪ್ರಸಾದ್, ಸುರೇಶ್, ನಾಗರಾಜು ಇನ್ನಿತರರು ಇದ್ದರು.
ಓಡಿಪಿ ಪ್ರಾಯೋಜಿತ ಪ್ರಕೃತಿ ರೈತ ಉತ್ಪಾದಕರ ಕೂಟ ಏರ್ಪಡಿಸಿದ್ದ ಈ ಆರೋಗ್ಯ ತಪಾಸಣಾ ಶಿಬಿರವನ್ನು ಹಾನಗಲ್ಲು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಲಕ್ಷ್ಮಿ ಪಾಂಡ್ಯ ಅವರು ಉದ್ಘಾಟಿಸಿದರು.
ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅಸ್ಮ, ಉಪಾಧ್ಯಕ್ಷರಾದ ಮಿಥುನ್,
ಓಡಿಪಿ ಸಂಯೋಜಕರಾದ ಜಾನ್ ರೊಡ್ರಿಗಸ್ ಮತ್ತು ರುಡಾಲ್ಫ್, ಡಾ. ನಿತಿನ್ ರಾಜ್ ಅವರು ಸಾಮಾನ್ಯ ಕಾಯಿಲೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿದರು. ಸಣ್ಣದಾಗಿ ಬರುವ ಶೀತ ಕೆಮ್ಮು, ಜ್ವರ, ಬಿಪಿ, ಶುಗರ್, ತಲೆ ಸುತ್ತು ಮತ್ತು ತಲೆ ನೋವುಗಳ ಬಗ್ಗೆ ಎಚ್ಚರ ವಹಿಸಿ ಕೂಡಲೇ ಹತ್ತಿರದ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಂಡು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಸಲಹೆ ನೀಡಲಾಯಿತು.
ಸಂತ ಜೋಸೆಫ್ ಆಸ್ಪತ್ರೆಯ ಆದಿತ್ಯ ಮತ್ತು ಹೆಲೆನ್ ಸಾಮಾನ್ಯ ಖಾಯಿಲೆಗಳ ತಪಾಸಣೆ ನಿತಿನ್ ರಾಜ್, ದಂತ ತಪಾಸಣೆ ಮಾಡಿದರು.
ಶಿಬಿರದಲ್ಲಿ 120 ರೋಗಿಗಳ ಆರೋಗ್ಯ ತಪಾಸಣೆ ನಡೆಸಲಾಯಿತು. ಜತೆಗೆ ಉಚಿತ ವೈದ್ಯಕೀಯ ಸಲಹೆ ಮತ್ತು ಅಗತ್ಯ ಔಷಧಿಗಳನ್ನು ನೀಡಲಾಯಿತು.
ರುಡಾಲ್ಫ್ ಡೆಸಾ, ರೋಜಾಮೇರಿ, ಸಂಧ್ಯಾ, ಸಿಬ್ಬಂದಿಗಳಾದ ಮಮತಾ, ಪುನೀತ್, ಪ್ರಕೃತಿ ರೈತ ಸಮಿತಿಯ ಅಧ್ಯಕ್ಷರಾದ ರಾಜು ಪೊನ್ನಪ್ಪ, ಪ್ರಸಾದ್, ಸುರೇಶ್, ನಾಗರಾಜು ಇನ್ನಿತರರು ಇದ್ದರು.
0 ಕಾಮೆಂಟ್‌ಗಳು