ಸೂಕ್ತ ಲಾರಿ ಬಾಡಿಗೆ ನೀಡುವಂತೆ ಒತ್ತಾಯಿಸಿ ಪಿಎಸ್‍ಎಸ್‍ಕೆ (ನಿರಾಣಿ ಶುಗರ್ಸ್) ಕಾರ್ಖಾನೆ ಮುಂಭಾಗ ಲಾರಿ ಮಾಲಿಕರು ಪ್ರತಿಭಟನೆ ನಡೆಸಿದರು.


 ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದಿರುವ ನಿರಾಣಿ ಶುಗರ್ಸ್ ಕಂಪನಿಯವರು ಕಬ್ಬು ಸಾಕಾಣಿಕೆ ಮಾಡುವ ಲಾರಿ ಮಾಲಿಕರಿಗೆ ಸರ್ಕಾರ ನಿಗದಿ ಮಾಡಿರುವ ಸೂಕ್ತ ಬಾಡಿಗೆ ನೀಡದ ಕಾರಣ ಗುರುವಾರ ಕಾರ್ಖಾನೆ ಮುಂಭಾಗ ದಕ್ಷಿಣ ಕರ್ನಾಟಕ ಕಬ್ಬು ಸಾಗಾಣಿಕೆ ಲಾರಿ ಮಾಲೀಕರ ಸಂಘಗಳ ಒಕ್ಕೂಟ ಹಾಗೂ ಶ್ರೀ ಲಕ್ಷ್ಮಿ ನಾರಾಯಣಸ್ವಾಮಿ ಲಾರಿ ಮತ್ತು ಟ್ರಾಕ್ಟರ್ ಮಾಲೀಕರು ಮತ್ತು ಚಾಲಕರ ಸಂಘದಿಂದ ಪ್ರತಿಭಟನೆ ನಡೆಯಿತು.

ಕಾರ್ಖಾನೆ ಆಡಳಿತ ಮಂಡಳಿಯವರು ಜಿಲ್ಲಾಧಿಕಾರಿಗಳು ಹಾಗೂ ಅಯುಕ್ತರ ಆದೇಶ ಪಾಲನೆ ಮಾಡುವಂತೆ ಆಡಳಿತ ಮಂಡಳಿಯವರನ್ನು ಒತ್ತಾಯಿಸಿದರು.

ಲಾರಿ ಮಾಲಿಕರ ಸಂಘದ ಅಧ್ಯಕ್ಷ ವೇಣುಗೋಪಾಲ್, ಉಪಾಧ್ಯಕ್ಷ ಲೋಕೇಶ, ತಮ್ಮಣ್ಣ, ಚಿಕ್ಕರಾಮೇಗೌಡ, ನವೀನ, ಗುರುಲಿಂಗಪ್ಪ, ಮಹೇಶ, ಸಂತೋಷ್, ರವಿ, ಸುರೇಶ್, ಬಲರಾಮು, ವಿಜಯಕುಮಾರ್ ಮುಂತಾದವರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು