ರಕ್ತದಾನ ಶಿಬಿರದ ಪೋಸ್ಟರ್ ಬಿಡುಗಡೆ ಮಾಡಿದ ಪೊಲೀಸ್ ಅಧಿಕಾರಿಗಳು

ವರದಿ-ಟಿ.ಬಿ.ಸಂತೋಷ, ಮದ್ದೂರು

ಮದ್ದೂರು : ತಾಲ್ಲೂಕಿನ ಪ್ರಗತಿಪರ ಸಂಘಟನೆಗಳ ವತಿಯಿಂದ ಶಿವಪುರದ ಧ್ವಜ ಸತ್ಯಾಗ್ರಹ ಸೌಧದಲ್ಲಿ ೭೫ ನೇ ಸ್ವಾತಂತ್ರö್ಯ ಅಮೃತ ಮಹೋತ್ಸವ ಹಾಗೂ ಗಾಂಧಿ ಜಯಂತಿಯ ಅಂಗವಾಗಿ ನಡೆಯುತ್ತಿರುವ ಬೃಹತ್ ರಕ್ತದಾನ ಶಿಬಿರದ ಪೋಸ್ಟರ್‌ನ್ನು ಮಳವಳ್ಳಿ ಡಿವೈಎಸ್‌ಪಿ ನವೀನ್ ಕುಮಾರ್ ಬಿಡುಗಡೆ ಮಾಡಿ ಶಿಬಿರಕ್ಕೆ ಶುಭ ಹಾರೈಸಿದರು
ಈ ಸಂದರ್ಭದಲ್ಲಿ ಅವರು ಮಾತನಾಡಿ, ಶಿವಪುರ ಧ್ವಜ ಸತ್ಯಾಗ್ರಹ ಸೌಧವು ಸ್ವಾತಂತ್ರö್ಯ ಹೋರಾಟದಲ್ಲಿ ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಇಂತಹ ಸ್ಥಳದಲ್ಲಿ ೭೫ ನೇ ಸ್ವಾತಂತ್ರö್ಯ ಅಮೃತ ಮಹೋತ್ಸವ ಹಾಗೂ ಗಾಂಧಿ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ ಎಂದರು.
ಮದ್ದೂರು ಪಿಎಸ್‌ಐ ಸಂತೋಷ್ ಮಾತನಾಡಿ, ಹಲವು ಸಂಸ್ಥೆಗಳು ಒಂದೇ ಸೂರಿನಡಿ ಒಕ್ಕೂಟ ರಚಿಸಿ ರಕ್ತದಾನ ಶಿಬಿರ ಆಯೋಜನೆ ಮಾಡುವ ಮುಖಾಂತರ ರಕ್ತ ಕೊರತೆಯನ್ನು ನೀಗಿಸುತ್ತಿರುವುದು ಸ್ವಾಗತಾರ್ಹ. ರಕ್ತ ಜೀವಗಳನ್ನು ಉಳಿಸುವ ಸಂಜೀವಿನಿಯಾಗಿದೆ ಎಂದರು.
ಹಲಗೂರು ಪಿಎಸ್‌ಐ ಶ್ರೀಧರ, ಮದ್ದೂರು ಇನ್ಸ್ಪೆಕ್ಟರ್ ಉಮೇಶ್, ಜನ ಸುರಕ್ಷಾ ಸಂಸ್ಥೆಯ ಅಧ್ಯಕ್ಷ ಶ್ರೀಕ ಶ್ರೀನಿವಾಸ್, ಲಿಂಗೇಗೌಡ, ಕುಂದನ್ ಕುಪ್ಪೆ ಕುಮಾರ್, ಜಯಂತ್ ಇನ್ನಿತರರು ಇದ್ದರು.