ಪಾಂಡವಾಸ್ ಲಯನ್ಸ್ ಸಂಸ್ಥೆ ನೂತನ ಅಧ್ಯಕ್ಷರಾಗಿ ಸುಂಕಾತೊಣ್ಣೂರು ಶಿವಕುಮಾರ್ ಆಯ್ಕೆ

 ವರದಿ-ವಿಶ್ವನಾಥ್, ಪಾಂಡವಪುರ

ಪಾಂಡವಪುರ : ತಾಲ್ಲೂಕಿನ ಪಾಂಡವಪುರ ಪಾಂಡವಾಸ್ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಸುಂಕಾತೊಣ್ಣೂರು ಗ್ರಾಮದ ಶಿವಕುಮಾರ್ ಅಧಿಕಾರ ಸ್ವೀಕರಿಸಿದರು.
ಪಟ್ಟಣದ ವೆಂಕಟೇಶ್ವರ ಸಮುದಾಯಭವನದಲ್ಲಿ ಮಂಗಳವಾರ ರಾತ್ರಿ ನಡೆದ ಸಮಾರಂಭದಲ್ಲಿ ನೂತನ ತಂಡಕ್ಕೆ ಡಿಸಿ ಕ್ಲಬ್ ಟ್ರೈನಿಂಗ್‍ನ
ಲಯನ್ ಎನ್.ಕೃಷ್ಣೇಗೌಡ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ಶಿವಕುಮಾರ್ ಮಾತನಾಡಿ, ಹಿಂದಿನ ಅಧ್ಯಕ್ಷರ ಎಲ್ಲ ಸಮಾಜ ಸೇವೆಗಳನ್ನು ನಾನು ಮುಂದುವರಿಸುತ್ತೇನೆ. ತಾಲ್ಲೂಕಿನ ಸುಂಕಾತೊಣ್ಣೂರು ಗ್ರಾಮ ಸೇರಿದಂತೆ ತಾಲ್ಲೂಕಿನಲ್ಲಿ ಆರೋಗ್ಯ ಸೇವೆಯಿಂದ ವಂಚಿತವಾಗಿರುವ ಎಲ್ಲ ಗ್ರಾಮಗಳಲ್ಲೂ ಸಂಸ್ಥೆ ವತಿಯಿಂದ  ಆರೋಗ್ಯ ಶಿಬಿರ ನಡೆಸುವ ಪ್ರಯತ್ನ ಮಾಡಲಾಗುವುದು. ಅಲ್ಲದೇ ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಅಭಿವೃದ್ಧಿ ಪಡಿಸುವ ಮೂಲಕ ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಮಾಜಿ ಜಿಲ್ಲಾ ರಾಜ್ಯಪಾಲ ಲಯನ್ ಕೆ.ದೇವೇಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಲಯನ್ ಸುಬ್ರಹ್ಮಣ್ಯ ನೂತನ ಸದಸ್ಯರಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಲಯನ್, ಎಂ.ಜಯರಾಮ್ ಗೌರವ ಅತಿಥಿಗಳಾಗಿ. ಲಯನ್, ಕೆ.ಎಲ್.ರಾಜಶೇಖರ್, ಜಿಲ್ಲಾ ರಾಜ್ಯಪಾಲ
ಲಯನ್, ವಿ.ಹರ್ಷ ಲಯನ್ ಆನಂದ್, ಆಡಳಿತಾಧಿಕಾರಿ
ಲಯನ್ ಪ್ರಕಾಶ್ ಮೇನಾಗರ, ಲಯನ್ ಬಾಲಕೃಷ್ಣ ಎಲ್.ಆರ್.,
ಕಾರ್ಯದರ್ಶಿ ಲಯನ್ ಪಿ.ಎನ್.ನಂಜುಂಡಸ್ವಾಮಿ, 
ಖಜಾಂಚಿ ಲಯನ್ ರಾಮಕೃಷ್ಣ ಹೆಗ್ಗಡಹಳ್ಳಿ ಮುಂತಾದವರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು