ಶ್ರೀ ಮಲೈ ಮಹದೇಶ್ವರ ಬೆಟ್ಟದಲ್ಲಿ ಇ-ಹುಂಡಿಗೆ ಚಾಲನೆ

 ವರದಿ-ಶಾರೂಖ್ ಖಾನ್, ಹನೂರು.

ಹನೂರು :  ತಾಲ್ಲೂಕಿನ ಮಹದೇಶ್ವರ ಬೆಟ್ಟ ಎಸ್‌ಬಿಐ ಶಾಖೆ ಅಧಿಕಾರಿಗಳ ಸಹಕಾರದೊಂದಿಗೆ ಶ್ರೀಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದಿಂದ ಇಡಲಾಗಿರುವ ಇ-ಹುಂಡಿ (ಗೋಲಕ)ಗೆ ಪ್ರಾಧಿಕಾರದ ಕಾರ್ಯದರ್ಶಿ ಕಾತ್ಯಾಯಿನಿ ದೇವಿ ಚಾಲನೆ ನೀಡಿದರು.
ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸುವ ಭಕ್ತರು, ಕಾಣಿಕೆ ಅರ್ಪಿಸುವವರು ಹುಂಡಿಗೆ ಹಣ ಹಾಕಬೇಕಿತ್ತು. ಇದೀಗ ಡಿಜಿಟಲ್ ಬಳಕೆಯಿಂದಲು ಸಹ ಇ-ಹುಂಡಿಗೆ ಭಕ್ತಾದಿಗಳು ಆನ್‌ಲೈನ್ ಮೂಲಕ ಹಣ ಪಾವತಿ ಮಾಡಬಹುದಾಗಿದೆ. ಹುಂಡಿಯನ್ನು ಮಹದೇಶ್ವರಸ್ವಾಮಿ ದೇವಾಲಯದ ಗರ್ಭಗುಡಿ ಆವರಣದಲ್ಲಿ ಇಡಲಾಗಿದ್ದು, ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಬೇಕೆಂದು ಅವರು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಉಪ ಕಾರ್ಯದರ್ಶಿ ಬಸವರಾಜು, ಲೆಕ್ಕ ಅಧೀಕ್ಷಕ ಪ್ರವೀಣ್ ಪಾಟೀಲ್ ಮತ್ತಿತರರು ಇದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು