ವರದಿ-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲೂಕಿನ ಪ್ರಗತಿಪರ ಸಂಘ ಸಂಸ್ಥೆಯಗಳ ಒಕ್ಕೂಟದ ವತಿಯಿಂದ ಅಕ್ಟೋಬರ್ ೨ರಂದು ಗಾಂಧಿ ಜಯಂತಿ ಹಾಗೂ ೭೫ನೇ ಸ್ವಾತಂತ್ರ‍್ಯ ಅಮೃತ ಮಹೋತ್ಸವದ ಅಂಗವಾಗಿ ಮದ್ದೂರಿನ ಶಿವಪುರ ಧ್ವಜ ಸತ್ಯಾಗ್ರಹ ಸೌಧ ಆವರಣದಲ್ಲಿ ಆಯೋಜಿಸಿರುವ ಬೃಹತ್ ರಕ್ತದಾನ ಶಿಬಿರಕ್ಕೆ ಕೆ.ಎಂ.ದೊಡ್ಡಿಯ ಸುಧಾಮೂರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಕರಡಕೆರೆ, ಹಾಗೂ ಇನ್ಹರ್‌ವೀಲ್ ಸಂಸ್ಥೆಯ ಪದಾಧಿಕಾರಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೆ.ಎಂ.ದೊಡ್ಡಿಯ ಪ್ರಜಾಪ್ರಿಯ ಸೇವಾ ಟ್ರಸ್ಟ್ ಕಚೇರಿಯಲ್ಲಿ ಪ್ರತಿಕಾಗೋಷ್ಟಿ ನಡೆಸಿ ಇನ್ಹರ್‌ವೀಲ್ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಮಂಜುಳ ರವರು ಮಾತನಾಡಿ, ೭೫ನೇ ಸ್ವಾತಂತ್ರö್ಯ ಅಮೃತ ಮಹೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ರಕ್ತದಾನ ಶಿಬಿರ ಏರ್ಪಡಿಸಿರುವುದು ಹೆಮ್ಮೆಯ ವಿಷಯವಾಗಿದೆ, ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರು ರಕ್ತದಾನವನ್ನು ಮಾಡಬೇಕು. ಈ ನಿಟ್ಟಿನಲ್ಲಿ ರಕ್ತದಾನ ಶಿಬಿರಕ್ಕೆ ನಮ್ಮ ಪೂರ್ಣ ಪ್ರಮಾಣದ ಸಹಕಾರ ನೀಡುತ್ತೇವೆ ಎಂದರು.
ಸುಧಾಮೂರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿ ಅನುಪಮಾ ಮಾತನಾಡಿ, ಗಾಂಧಿ ಜಯಂತಿಯ ಅಂಗವಾಗಿ ಜೀವ ಉಳಿಸುವ ಕಾರ್ಯವಾದ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಅರ್ಥಪೂರ್ಣವಾಗಿದೆ. ರಕ್ತದಾನ ಶಿಬಿರದಲ್ಲಿ ಹೆಚ್ಚು ರಕ್ತವನ್ನು ಸಂಗ್ರಹಿಸಿ ಒಂದು ಐತಿಹಾಸಿಕವಾಗಿ ಹೆಜ್ಜೆ ಇಡಲು ನಾವೆಲ್ಲರೂ ಪೂರ್ಣ ಪ್ರಮಾಣದಲ್ಲಿ ಸಹಕಾರ ನೀಡುತ್ತೇವೆ ಎಂದರು.
ಸುಧಾಮೂರ್ತಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಆಧ್ಯಕ್ಷೆ ಕರಡಕೆರೆ ವಸಂತಮ್ಮ, ಉಪಾಧ್ಯಕ್ಷೆ ಲೀಲಾ ಅಪ್ಪಾಜಿಗೌಡ, ಸದಸ್ಯರಾದ ಪೂರ್ಣಿಮಾ ಭಗವಾನ್, ಕರಡಕೆರೆ ಇಂದಿರಾ ಮುಂತಾದವರು ಉಪಸ್ಥಿತರಿದ್ದರು.
