ಹಸು ಮೇಯಿಸುತ್ತಿದ್ದ ವೃದ್ಧನನ್ನು ಕೊಂದು ಹಾಕಿದ ಚಿರತೆ

ವರದಿ-ಶಾರೂಖ್ ಖಾನ್, ಹನೂರು


ಹನೂರು : ಹಸು ಮೇಯಿಸಲು ಹೋಗಿದ್ದ ವೃದ್ಧ ರೈತನೋರ್ವ ಚಿರತೆಗೆ ಬಲಿಯಾಗಿರುವ ಘಟನೆ ಹನೂರು ತಾಲೂಕಿನ ಕೆ.ವಿ.ಎನ್. ದೊಡ್ಡಿ ಗ್ರಾಮದಲ್ಲಿ ನೆಡೆದಿದೆ.
ಗ್ರಾಮದ ಗೋವಿಂದಯ್ಯ (65) ಮೃತಪಟ್ಟ ದುರ್ದೈವಿ. 
ಹಸು ಮೇಯಿಸಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ. 
ಅಲ್ಲದೆ, ಚಿರತೆ ಕರು ಮತ್ತು ಮೇಕೆಯೊಂದನ್ನು ಬಲಿ ತೆಗೆದುಕೊಂಡಿದೆ ಎನ್ನಲಾಗಿದ್ದು, ಈ ಭಾಗದ ಜನರಲ್ಲಿ ಆತಂಕಕ್ಕೆ ಮೂಡಿದೆ. ಚಿರತೆಯ ಉಪಟಳಕ್ಕೆ ಕಡಿವಾಣ ಹಾಕುವಂತೆ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. 
ಸುದ್ದಿ ತಿಳಿಯುತ್ತಿದ್ದಂತೆ ರೈತ ಮುಖಂಡರು ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.