ವರದಿ-ರೇವಣ್ಣ ಟಿ.ನರಸೀಪುರ
ಟಿ.ನರಸೀಪುರ : ತಾಲ್ಲೂಕಿನ ಹನುಮಾನಾಳು ಗ್ರಾಮ ಪಂಚಾಯತಿ ನೂತನ ಅಧ್ಯಕ್ಷರಾಗಿ ಗಿರಿಜಾ ಚುನಾಯಿತರಾದರು. ಹಿಂದಿನ ಅಧ್ಯಕ್ಷೆ ಕೃಷ್ಣ ಬೃಂದಾಗೌಡ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಗಿರಿಜಾ 6 ಮತಗಳನ್ನು ಪಡೆದು ಜಯಶಾಲಿಯಾದರು.
ಒಟ್ಟು 11 ಸದಸ್ಯರನ್ನು ಹೊಂದಿರುವ ಹನುಮಾನಾಳು ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಗಿರಿಜಾ ಮತ್ತು ರುಕ್ಮಿಣಿ ನಾಮಪತ್ರ ಸಲ್ಲಿಸಿದ್ದರು. ನಂತರ ನಡೆದ ಚುನಾವಣೆಯಲ್ಲಿ ಗಿರಿಜಾ 6 ಮತ ಪಡೆದು ಗೆಲುವಿನ ನಗೆ ಬೀರಿದರೆ ಇವರ ಪ್ರತಿಸ್ಪರ್ಧಿ ರುಕ್ಮಿಣಿ 5 ಮತ ಪಡೆದು ಕೇವಲ 1 ಮತದಿಂದ ಪರಾಭವಗೊಂಡರು.
ಮುಖಂಡರಾದ ಮರಿಗೌಡ, ಗ್ರಾಪಂ ಸದಸ್ಯರಾದ ವಿ.ಸುರೇಶ್. ಬೃಂದಾ ಕೃಷ್ಣೇಗೌಡ, ದೀಪಕ್, ಸುರೇಂದ್ರ, ಹೆಚ್.ಎಸ್.ಶಂಕರ್, ಶಿವಮ್ಮ, ಲಕ್ಷ್ಮಮ್ಮ, ಹೆಚ್.ಎಂ.ಕುಮಾರ್, ಸುರೇಶ್ ಇದ್ದರು.
0 ಕಾಮೆಂಟ್‌ಗಳು