ಶ್ರೀ ಛಾಯಾದೇವಿ ಅನಾಥಾಲಯದ ಮಕ್ಕಳಿಂದ ಉದ್ಘಾಟನೆ
ವರದಿ-ನಜೀರ್ ಅಹಮದ್, ಮೈಸೂರು
ಮೈಸೂರು : ನಗರದ ನೆಕ್ಸಸ್ ಸೆಂಟರ್ ಸಿಟಿ ಮಾಲ್‍ನಲ್ಲಿ ನೂತನವಾಗಿ ಆರಂಭವಾದ ಬಾರ್ಬೆಕ್ಯೂ ನೂತನ ಮಳಿಗೆಯನ್ನು ಮೈಸೂರಿನ ಶ್ರೀ ಛಾಯಾದೇವಿ ಅನಾಥಾಶ್ರಮದ ಮಕ್ಕಳು ಟೇಪ್ ಕತ್ತರಿಸಿ ಉದ್ಘಾಟಿಸಿದರು.
ಒಂದೇ ಸಮಯದಲ್ಲಿ 112 ಜನ ಕುಳಿತು ಊಟ ಮಾಡಬಹುದಾದ 4546 ಚದರ ಅಡಿ ವಿಸ್ತೀರ್ಣವುಳ್ಳ ಈ ರೆಸ್ಟೋರೆಂಟ್‍ನ ಒಳಾಂಗಣವನ್ನು ಆಕರ್ಷಕವಾಗಿ ವಿನ್ಯಾಸ ಮಾಡಲಾಗಿದ್ದು, ಅನೌಪಚಾರಿಕ ಭೋಜನ, ಕಾರ್ಪೋರೇಟ್ ಭೋಜನ, ಮತ್ತು ಕುಟುಂಬ ಸಮಾರಂಭಗಳಿಗೆ ಆತಿಥ್ಯ ವಹಿಸುವ ಶ್ರೇಷ್ಠ ಸ್ಥಳವನ್ನಾಗಿ ವಿನ್ಯಾಸ ಮಾಡಲಾಗಿದೆ.
ಬಾರ್ಬೆಕ್ಯೂ ನೇಷನ್ ಹಾಸ್ಪಿಟಾಲಿಟಿ ಲಿಮಿಟೆಡ್‍ನ ಮುಖ್ಯ ಕಾರ್ಯಾಚರಣೆ ಅಧಿಕಾರಿ ಫೈಝ್ ಅಝೀಮ್ ಮಾತನಾಡಿ, ಮೈಸೂರಿನಲ್ಲಿ ನಮ್ಮ ಸಂಸ್ಥೆಯ ಎರಡನೇ ಮಳಿಗೆಯನ್ನು ನಾವು ಪ್ರಾರಂಭಿಸುತ್ತಿದ್ದೇವೆ. ಮಳಿಗೆ ಉತ್ಸಾಹಪೂರ್ಣ ವಾತಾವರಣ ನಮ್ಮ ಅತಿಥಿಗಳಿಗೆ ಸಂತೋಷವನ್ನುಂಟು ಮಾಡುತ್ತದೆ. ಆತಿಥ್ಯಕ್ಕೆ ನಾವು ವಿಶ್ವ ಮಾನ್ಯತೆ ಪಡೆದಿದ್ದೇವೆ. ನಮ್ಮ ಅತಿಥಿಗಳು ಯಾವುದೇ ರೀತಿಯಲ್ಲಿ ನಿರಾಶರಾಗದೆ. ಸಂತೋಷದಿಂದ ನಮ್ಮ ಆತಿಥ್ಯ ಸ್ವೀಕರಿಸುತ್ತಾರೆ ಎಂದರು.
ನಮ್ಮ ಅತಿಥಿಗಳಿಗೆ ಬೇಕಾದ ಎಲ್ಲ ತಿನಿಸುಗಳನ್ನು ತಿನ್ನುವ ಅವಕಾಶ ಮಾಡಿಕೊಡುವ ಈಟ್-ಆಲ್-ಯು-ಕ್ಯಾನ್ ಬಫೆ, ಬಾರ್ಬೆಕ್ಯೂ ನೇಷನ್‍ನಲ್ಲಿ ಇದ್ದು, ಅನೇಕ ಸಸ್ಯಹಾರಿ ಮತ್ತು ಮಾಂಸಹಾರಿ ಆಹಾರಗಳು ನಮ್ಮಲ್ಲಿ ಲಭ್ಯವಿರುತ್ತವೆ. ಸ್ಟಾರ್ಟರ್‍ಗಳಲ್ಲಿ ಮಾಂಸಾಹಾರಿಗಳಿಗಾಗಿ ಮೆಕ್ಸಿಕನ್ ಚಿಲ್ಲಿ, ಗಾರ್ಲಿಕ್ ಫಿಷ್, ಚಿಕನ್ ವಿಂಗ್ಸ್, ತಂದೂರಿ ಟಂಗಡಿ, ಕಾಜೂ ಶೀಖ್ ಕಬಾಬ್, ಕೋಸ್ಟಲ್ ಬಾರ್ಬೆಕ್ಯೂ ಪ್ರಾನ್ಸ್, ಸಸ್ಯಹಾರಿಗಳಿಗಾಗಿ ಕುಟಿ ಮಿರ್ಚ್ ಕಾ ಪನ್ನೀರ್ ಟಿಕ್ಕಾ, ವಾಕ್ ಟಾಸ್ಟ್ ಶೀಖ್ ಕಬಾಬ್, ಶಬ್‍ನಮ್ ಕೆ ಮೋತಿ ಮಶ್ರೂಮ್, ಮೂರಿ ಕಬಾಬ್ ಮತ್ತು ಹನಿ ಸೇಸಮ್ ಸಿನಮನ್ ಪೈನಾಪಲ್ ಮುಂತಾದ ತಿನಿಸುಗಳು ಲಭ್ಯವಿರುತ್ತವೆ. ಅಲ್ಲದೇ, ಚಿಕನ್ ದಂ ಬಿರಿಯಾನಿ, ರಾಜಸ್ತಾನಿ ಲಾಲ್ ಮಾಸ್ ಮತ್ತು ದಂ ಕಾ ಮುರ್ಗಾ, ಸಸ್ಯಹಾರಿಗಳಿಗೆ, ಪನ್ನೀರ್ ಬಟರ್ ಮಸಾಲ, ಮೇಥಿ ಮಟರ್ ಮಲಾಯ್, ದಾಲ್ ಎ ದಮ್ ಮತ್ತು ವೆಜ್ ದಂ ಬಿರಿಯಾನಿ ಸಿಗುತ್ತದೆ. ಇದಲ್ಲದೇ ಇನ್ನೂ ಹತ್ತು ಹಲವಾರು ತಿನಿಸುಗಳು ನಮ್ಮಲ್ಲಿ ಲಭ್ಯವಿದೆ ಎಂದು ತಿಳಿಸಿದರು.
ಯಶಸ್ವಿ ಆರಂಭ :
ಮಳೆಗೆ ಆರಂಭದಲ್ಲೇ ನೂರಾರು ಗ್ರಾಹಕರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಯಿತು. ಉದ್ಘಾಟನಾ ಕಾರ್ಯಕ್ರಮದಲ್ಲಿ ರೀಜನಲ್ ಹೆಡ್ ಅರೂಪ್, ಮಾರ್ಕೆಟಿಂಗ್ ವಿಭಾಗದ ಜಗದೀಪ್, ಬಿಸಿನೆಸ್ ಡೆವಲಪ್‍ಮೆಂಟ್ ವಿಭಾಗದ ಆನಂದ್, ಎಆರ್‍ಎಂ ದೀಪಕ್, ಕ್ಲಸ್ಟರ್ ಮ್ಯಾನೇಜರ್ ಅನೀಲ್ ಇದ್ದರು.
ಅನಾಥ ಮಕ್ಕಳೇ ಮೊದಲ ಅತಿಥಿಗಳು :
ಬಾರ್ಬೆಕ್ಯೂ ನೂತನ ಮಳಿಗೆಯಲ್ಲಿ ಇಂದು ಮಕ್ಕಳ ಕಲರವ ಜೋರಾಗಿತ್ತು. ಶ್ರೀ ಛಾಯಾದೇವಿ ಅನಾಥಾಶ್ರಮದ ಮಕ್ಕಳು ಇಲ್ಲಿನ ಮೊದಲ ಅತಿಥಿಗಳಾಗಿ ಆಗಮಿಸಿ ಉಚಿತವಾಗಿ ತಮಗೆ ಇಷ್ಟವಾದ ತಿನಿಸುಗಳಲ್ಲು ಸವಿದು, ಉಡುಗೊಡೆಯನ್ನೂ ಸಹ ಪಡೆದು ಸಂತೋಷದಿಂದ ಹಿಂತಿರುಗಿದರು. ಈ ಮೂಲಕ ಬಾರ್ಬೆಕ್ಯೂ ತನ್ನ ಮಾನವೀಯತೆ ವ್ಯಕ್ತಪಡಿಸುವಲ್ಲಿ ಯಶಸ್ವಿಯಾಯಿತು.
ಮಕ್ಕಳೊಂದಿಗೆ ಕುಣಿದ ಸಿಬ್ಬಂದಿ :
ಕಾರ್ಯಕ್ರಮಕ್ಕೂ ಮುನ್ನ ರೆಸ್ಟೋರೆಂಟ್ ಸಿಬ್ಬಂದಿಗಳು ಶ್ರೀ ಛಾಯಾದೇವಿ ಅನಾಥಾಶ್ರಮದ ಮಕ್ಕಳ ಜತೆ ಕುಣಿದು ಕುಪ್ಪಳಿಸಿದರು. ನಂತರ ಮಕ್ಕಳಿಗೆ ವಿಶಿಷ್ಟವಾಗಿ ಆಹಾರ ಪದಾರ್ಥಗಳನ್ನು ಉಣಬಡಿಸಲಾಯಿತು.
0 ಕಾಮೆಂಟ್‌ಗಳು