ಕಾಂಗ್ರೆಸ್ ಪಕ್ಷದ ಡೈನಾಮಿಕ್ ಸ್ಟಾರ್ ರೇಹಾನ್ ಬೇಗ್, ವಿರೋಧಿಗಳಿಗೆ ಸಮರ್ಥವಾಗಿ ಠಕ್ಕರ್ ಕೊಡುವ ಯುವ ಮುಖಂಡ

 ವರದಿ: ನಿಷ್ಕಲ ಎಸ್.ಗೌಡ, ಮೈಸೂರು

ಮೈಸೂರು : ಮೈಸೂರು ನಗರ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಇತ್ತೀಚೆಗೆ ನೇಮಕವಾದ ಡಿ.ರೇಹಾನ್ ಬೇಗ್, ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ಸಮರ್ಥ ಸಂಘಟಕರಾಗಿ ಹೊರಹೊಮ್ಮುತ್ತಿದ್ದಾರೆ. 

ಮುಸ್ಲಿಂ ಸಮುದಾಯದ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಂತಿದ್ದರೂ, ಪಕ್ಷದ ಕೆಲವು ಹಿರಿಯ ಮುಖಂಡರನ್ನು ಶಾಸಕರನ್ನು ಹೊರತುಪಡಿಸಿ ಉಳಿದ ನಾಯರ‍್ಯಾರೂ ಬಾಯಿಯೇ ಬಿಡುವುದಿಲ್ಲ, ಸಮುದಾಯದ ವಿರುದ್ಧ ವಿರೋಧ ಪಕ್ಷಗಳು ಸಾಕಷ್ಟು ಟೀಕೆಗಳನ್ನು ಮಾಡಿದರೂ ಅದನ್ನು ಕೇಳಿ ಸುಮ್ಮನಾಗುತ್ತಾರೆಯೇ ವಿನಹ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಇಂತಹ ಸಂದರ್ಭದಲ್ಲಿ ಉದಯಿಸಿರುವ ರೇಹಾನ್ ಬೇಗ್, ಎಟಿಗೆ ಎದಿರೇಟು, ಮಾತಿಗೆ ಮಾತು, ಎಂಬAತೆ ಕಾಂಗ್ರೆಸ್ ಪಕ್ಷದ ವಿರುದ್ಧ ಯಾರೇ ಮಾತನಾಡಿದರೂ ಅದಕ್ಕೆ ಸಮರ್ಥವಾಗಿ ಉತ್ತರ ಕೊಡುವ ಮೂಲಕ ಇದೀಗ ಸಾಮಾಜಿಕ ಜಾಲತಾಣದಲ್ಲಿ ಮಿಂಚುತ್ತಿದ್ದಾರೆ. 

ಹೆಸರಾಂತ ಉದ್ಯಮಿಯೂ ಆಗಿರುವ ರೇಹಾನ್ ಬೇಗ್ ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಆಳವಾಗಿ ತಿಳಿದುಕೊಂಡು ಅದನ್ನು ಜನರ ಮುಂದೆ ಪ್ರಚಾರ ಪಡಿಸುವುದರಲ್ಲಿ ನಿಸ್ಸೀಮರು, ಅಲ್ಲದೇ ಕೇಂದ್ರ ಸರ್ಕಾರದ ಬಿಜೆಪಿ ಆಡಳಿತದ ಹತ್ತಾರು ನ್ಯೂನತೆಗಳನ್ನು ಎತ್ತಿ ಹಿಡಿಯುವ ಮೂಲಕ ಜನರ ಗಮನವನ್ನು ಸೆಳೆಯುತ್ತಿದ್ದಾರೆ.

ಅದು ನೋಟು ಅಮಾನ್ಯೀಕರಣದಿಂದ ಆದ ಅನಾಹುತಗಳು, ಕಪ್ಪು ಹಣ ವಾಪಸ್ ತರುತ್ತೇವೆ ಎಂದು ಹೇಳಿದ್ದ ಪ್ರಧಾನಿಗಳು ಇಂದಿಗೂ ಯಾಕೆ ಕಪ್ಪು ಹಣ ತಂದಿಲ್ಲ ಎನ್ನುವ ಬಗ್ಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳುತ್ತಾ.. ಪ್ರತಿಯೊಬ್ಬ ನಾಗರಿಕರಿಗೂ 15 ಲಕ್ಷ ಹಣ ಹಾಕುತ್ತೇವೆ ಎಂದ ಪ್ರಧಾನಿಗಳ ಮಾತನ್ನು ಪ್ರಶ್ನಿಸುವುದು ಸೇರಿದಂತೆ, ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ, ಎಥೆನಾಲ್ ಹಗರಣವನ್ನೂ ಸಹ ರೇಹಾನ್ ಬೇಗ್ ಪ್ರಶ್ನಿಸುತ್ತಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗಿರುವ ರೇಹಾನ್ ಬೇಗ್ ಮೈಸೂರಿನಲ್ಲಿ ಕಾಂಗ್ರೆಸ್ ಪಕ್ಷದ ಉದಯೋನ್ಮುಖ ಹೀರೋ ಆಗಿ ಮಿಂಚುತ್ತಿದ್ದಾರೆ.