ಮೈಸೂರಿನ ಹಿರಿಯ ಪತ್ರಕರ್ತ ಆರ್. ಮಧುಸೂದನ್ ನಿಧನ


 ಮೈಸೂರು : ಹಿರಿಯ ಪತ್ರಕರ್ತರು ಹಾಗೂ ಮೀಡಿಯಾ ಟಿವಿಯ ಛಾಯಾಗ್ರಾಹಕರಾದ ಆರ್. ಮಧುಸೂದನ್ (48) ಅವರು ತೀವ್ರ ಅನಾರೋಗ್ಯದಿಂದ ಶುಕ್ರವಾರ ರಾತ್ರಿ ಸುಮಾರು 7.30ಕ್ಕೆ ನಿಧನರಾದರು.

ಮೃತತು ತಾಯಿ ಶ್ರೀಮತಿ ನಾಗಮಣಿ, ಪತ್ನಿ ಶ್ರೀಮತಿ ಆಶಾ, ಒಬ್ಬ ಪುತ್ರ ಹಾಗೂ ಓರ್ವ ಪುತ್ರಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಶನಿವಾರ ಮಧ್ಯಾಹ್ನ ಚಾಮುಂಡಿ ಬೆಟ್ಟದ ತಪ್ಪಲಿನ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು