ದರಸಗುಪ್ಪೆ, ಕಪರನಕೊಪ್ಪಲು ಗ್ರಾಮದಲ್ಲಿ ರಾಧಮ್ಮ ದಾಸೇಗೌಡರ ಸ್ಮರಣಾರ್ಥ ಉಚಿತ ಶ್ರವಣ ಯಂತ್ರ ವಿತರಣೆ


 ಶ್ರೀರಂಗಪಟ್ಟಣ : ತಾಲ್ಲೂಕಿನ ದರಸಗುಪ್ಪೆ (ಕಪರನಕೊಪ್ಪಲು) ಗ್ರಾಮದಲ್ಲಿ ಭಾನುವಾರ ರಾಧಮ್ಮ ದಾಸೇಗೌಡರ ಸ್ಮರಣಾರ್ಥ ಅವರ ಮಕ್ಕಳು ಎರಡೂ ಗ್ರಾಮದ ಸಾರ್ವನಿಕರಿಗಾಗಿ ಉಚಿತ ಶ್ರವಣ ದೋಷ ಪರೀಕ್ಷೆ ಶಿಬಿರ ಏರ್ಪಡಿಸಿದ್ದರು.

ಕಪರನಕೊಪ್ಪಲು ಗ್ರಾಮದ ಮಾನಸ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ನಡೆದ ತಪಾಸಣಾ ಶಿಬಿರವನ್ನು ನಿವೃತ್ತ ಮಂಡ್ಯ ಡಿಹೆಚ್‍ಓ ಡಾ.ಬಿ.ಎನ್.ಮರೀಗೌಡ ಅವರು ಉದ್ಘಾಟಿಸಿದರು.

ಶಿಬಿರದಲ್ಲಿ ಹೆಸರಾಂತ ವೈದ್ಯರಾದ ಡಾ.ಬಿ.ಡಿ.ಕೃಷ್ಣಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ 300ಕ್ಕೂ ಹೆಚ್ಚು ಸಾರ್ವಜನಿಕರಿಗೆ ಶ್ರವಣ ದೋಷ ಪರೀಕ್ಷೆ ನಡೆಸಿದರಲ್ಲದೇ, ಸುಮಾರು 8 ಸಾವಿರ ರೂ. ಮೌಲ್ಯದ 25 ಶ್ರವಣ ಯಂತ್ರಗಳನ್ನು ಉಚಿತವಾಗಿ ನೀಡಿದರು. 

ಡಾ.ಬಿ.ಡಿ.ಕೃಷ್ಣಪ್ಪ ಅವರು ಈ ಹಿಂದೆ ದರಸಗುಪ್ಪೆ ಗ್ರಾಮದಲ್ಲಿ ವೈದ್ಯರಾಗಿ ಕೆಲಸ ನಿರ್ವಹಿಸಿ ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರರಾಗಿದ್ದರು. ಗ್ರಾಮದಲ್ಲಿ ತಾವು ಮಾಡಿದ ಸೇವೆಯ ನೆನಪಿಗಾಗಿ ಅವರು ಈ ಕಾರ್ಯಕ್ರಮ ಆಯೋಜಿಸಿದ್ದರು.

ಕಾರ್ಯಕ್ರಮದಲ್ಲಿ ಪಾಂಡವಪುರ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷರಾದ ಚಿಕ್ಕ ರಾಮನುಜೇಗೌಡ, ಮಂಡ್ಯ ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಪಿ.ಎಲ್.ನಂದೀಶ್, ಮಕ್ಕಳ ತಜ್ಞ ಡಾ.ಪಿ.ಎಂ.ಜಗದೀಶ್ ಕುಮಾರ್, ದಿ. ರಾಧಮ್ಮ ದಾಸೇಗೌಡರ ಮಕ್ಕಳಾದ ಬಿ.ಡಿ.ಶ್ರೀನಿವಾಸೇಗೌಡ, ನಿವೃತ್ತ ಎಡಿ ಬಿ.ಡಿ.ರಾಜೇಂದ್ರ, ನಿವೃತ್ತ ಎಸಿಪಿ ಬಿ.ಡಿ.ಧನಂಜಯ್ಯ, ಇಎನ್‍ಟಿ ತಜ್ಞ ವೈದ್ಯರಾದ ಡಾ.ಬಿ.ಡಿ.ಕೃಷ್ಣಪ್ಪ, ಬಿ.ಡಿ.ಚಂದ್ರಕಾಂತ, ಪ್ರೊ.ರಾಮಚಂದ್ರ, ಮುಡಾ ನಿವೃತ್ತ ಇಂಜಿನಿಯರ್ ಲೋಕೇಶ್, ಡಾ.ಮಂಜುಳ ಕೃಷ್ಷಪ್ಪ, ಡಾ.ಅಕ್ಷಯ್ ಕೃಷ್ಣಪ್ಪ, ಡಾ.ಸ್ವಾತಿ ಅಕ್ಷಯ್, ಶ್ರವಣ ತಜ್ಞರಾದ ಮಿಥುನ್, ಸಹನ, ಮೈಕ್ರೋ ಲ್ಯಾಬ್ ನಂದೀಶ್, ಗ್ರಾಮದ ಮುಖಂಡರಾದ  ದೊಡ್ಡನಾಗಣ್ಣ, ಪಟೇಲ್ ರಂಗಪ್ಪ, ರಾಜಲಕ್ಷ್ಮಿ ರಾಮನುಜೇಗೌಡ, ಶ್ರೀಧರ್, ರಾಧ, ನಯನ, ಪರಮೇಶ್, ಪ್ರಾಣೇಶ್, ಗೋವಿಂದಪ್ಪ  ಬಾಲರಾಜು, ಪ್ರಾಣೇಶ್, ವೆಂಕಟರಾಮು, ಶಂಕರಪ್ಪ, ಕುಮಾರ್, ನಾರಾಯಣ ಮತ್ತು ಮಾನಸ ಶಾಲೆಯತ ಮುಖ್ಯೋಪಾಧ್ಯಾಯರು, ಶಿಕ್ಷಕರು, ಸಿಬ್ಬಂದಿಗಳು, ಕಪರನಕೊಪ್ಪಲು, ದರಸಗುಪ್ಪೆ ಗ್ರಾಮಸ್ಥರು ಮತ್ತು ಮುಖಂಡರು ಶಿಬಿರದಲ್ಲಿ ಭಾಗವಹಿಸಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು