ಮೈಸೂರು : ಡಿ.8 ರಂದು ನಗರದ ರಿಯೋ ಮೆರಿಡಿಯನ್ ಹೋಟೆಲ್‍ನಲ್ಲಿ ನೌಕಾಪಡೆ ದಿನವನ್ನು ಆಚರಿಸಲಾಗುವುದು ಎಂದು ನಿವೃತ್ತ ನಾಕಾಪಡೆ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಗಜಾನನ ಟಿ.ಭಟ್ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ನಮ್ಮ ಸಂಘದ ವತಿಯಿಂದ ನೌಕಾಪಡೆ ಸಾಪ್ತಾಹದ ಅಂಗವಾಗಿ ಡಿ.1 ರಂದು ರಕ್ತದಾನ ಶಿಬಿರ ಮತ್ತು ನೌಕಾಪಡೆ ದಿನವನ್ನು ಯಶಸ್ವಿಯಾಗಿ ನಡೆಸಲಾಗಿದೆ.
ಡಿ.8 ರಂದು ನಡೆಯುವ ನೌಕಾಪಡೆ ದಿನದಂದು ಭಾರತೀಯ ನೌಕಾಸೇನೆಯ ನಿವೃತ್ತ ಯೋಧರಾದ ಉಜಿರೆಯ 78 ವರ್ಷದ ಎ.ಕೆ.ಶಿವನ್ ಅವರನ್ನು ಗೌರವಿಸುತ್ತಿದ್ದೇವೆ ಎಂದರು.
ನೌಕಾಪಡೆ ದಿನದ ಮಹತ್ವ:
1971ರ ಇಂಡೋ-ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯದ ಸಂಭ್ರಮಕ್ಕೆ ಇಂದಿಗೆ 53 ವರ್ಷಗಳು ಸಂದಿವೆ. ಪ್ರತಿ ವರ್ಷ ಡಿಸೆಂಬರ್ 4 ರಂದು ದೇಶದ ಹೆಮ್ಮೆಯ ಭಾರತೀಯ ನೌಕಾ ಪಡೆಗಳ ಪಾತ್ರ ಮತ್ತು ಸಾಧನೆಗಳನ್ನು ಗುರುತಿಸಿ, ನೌಕಾಪಡೆಗೆ ಗೌರವವನ್ನು ಸೂಚಿಸಲಾಗುತ್ತದೆ. 1971 ರಲ್ಲಿ ಇಂಡೋ-ಪಾಕಿಸ್ತಾನ ಯುದ್ಧದ ಸಮಯದಲ್ಲಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಟ್ರೈಡೆಂಟ್ ಪ್ರಾರಂಭಿಸಿದ ನೆನಪಿಗಾಗಿ ಹಾಗೂ ವಿವಿಧ ಕಾರ್ಯಾಚರಣೆಯಲ್ಲಿ ವೀರ ಮರಣ ಹೊಂದಿದ ಯೋಧರನ್ನು ಸ್ಮರಿಸುವ ಸಲುವಾಗಿ ಈ ದಿನದ ಆಚರಣೆಯೂ ಚಾಲ್ತಿಯಲ್ಲಿದೆ.
ಇದು ಭಾರತೀಯ ನೌಕಾ ಪಡೆ ದಿನದ ಇತಿಹಾಸ.
ಭಾರತೀಯ ನೌಕಾಪಡೆಯನ್ನು 1612 ರಲ್ಲಿ ಈಸ್ಟ್ ಇಂಡಿಯಾ ಕಂಪನಿ ಸ್ಥಾಪಿಸಿತು. 1971 ರಲ್ಲಿ ಭಾರತ-ಪಾಕ್ ಯುದ್ಧದ ಸಮಯದಲ್ಲಿ, ಪಾಕಿಸ್ತಾನವು ಡಿಸೆಂಬರ್ 3 ರಂದು ಭಾರತೀಯ ವಾಯು ನೆಲೆಗಳ ಮೇಲೆ ದಾಳಿ ಮಾಡಿತು. ಅವರ ಆಕ್ರಮಣಕಾರಿ ದಾಳಿಗಳಿಗೆ ಪ್ರತಿಕ್ರಿಯೆಯಾಗಿ, ಭಾರತೀಯ ನೌಕಾಪಡೆಯು ಡಿಸೆಂಬರ್ 4 ಮತ್ತು 5 ರ ರಾತ್ರಿ ದಾಳಿ ಮಾಡಲು ಯೋಜನೆ ರೂಪಿಸಿತ್ತು. ಆ ವೇಳೆಗೆ ಬಾಂಬ್ ಸ್ಫೋಟಗಳನ್ನು ನಡೆಸಲು ಪಾಕಿಸ್ತಾನವು ವಿಮಾನವನ್ನು ಹೊಂದಿರಲ್ಲಿಲ್ಲ. ಆಪರೇಷನ್ ಟ್ರೈಡೆಂಟ್ ಸಮಯದಲ್ಲಿ ಭಾರತೀಯ ನೌಕಾಪಡೆಯು ಕರಾಚಿಯ ಪಾಕಿಸ್ತಾನ ನೌಕಾಪಡೆಯ ಪ್ರಧಾನ ಕಛೇರಿಯ ಮೇಲೆ ಕಣ್ಣಿಟ್ಟಿತು.
ಈ ವೇಳೆಯಲ್ಲಿ ಮೂರು ಕ್ಷಿಪಣಿ ದೋಣಿಗಳಾದ ಐಎನ್‍ಎಸ್ ವೀರ್, ಐಎನ್‍ಎಸ್ ನಿಪತ್ ಮತ್ತು ಐಎನ್‍ಎಸ್ ನಿರ್ಘಾಟ್ ಗಳನ್ನು ಬಳಸಿಕೊಂಡಿತ್ತು. ಈ ಯುದ್ದದಲ್ಲಿ ಶತ್ರು ಸೈನ್ಯವಾದ ಪಾಕಿಸ್ತಾನಿ ನೌಕಾಪಡೆಯ ಹಡಗುಗಳನ್ನು ಮುಳುಗಿಸುವಲ್ಲಿ ಯಶಸ್ವಿಯಾಯಿತು. ಈ ವೇಳೆಯಲ್ಲಿ ಪಾಕಿಸ್ತಾನಿ ನೌಕಾಪಡೆ ಸಿಬ್ಬಂದಿಗಳು ಸಾವನ್ನಪ್ಪಿದ್ದರು. ಆಪರೇಷನ್ ಟ್ರೈಡೆಂಟ್ ಕಾರ್ಯಾಚರಣೆಯ ಸಂಪೂರ್ಣ ನೇತೃತ್ವವನ್ನು ಕಮಾಂಡರ್ ಕಾಸರಗೋಡು ಪಟ್ಟಣಶೆಟ್ಟಿ ಗೋಪಾಲ್ ರಾವ್ ವಹಿಸಿದ್ದು , ಕೊನೆಗೂ ಭಾರತೀಯ ನೌಕಾ ಪಡೆಯೂ ಯಶಸ್ವಿಯಾಯಿತು. ಮೇ 1972 ರಲ್ಲಿ ನಡೆದ ಹಿರಿಯ ನೌಕಾ ಅಧಿಕಾರಿಗಳ ಸಮ್ಮೇಳನದಲ್ಲಿ, 1971 ರ ಇಂಡೋ-ಪಾಕ್ ಯುದ್ಧದ ಸಮಯದಲ್ಲಿ ಭಾರತೀಯ ನೌಕಾಪಡೆಯ ಪ್ರಯತ್ನಗಳು ಮತ್ತು ಸಾಧನೆಗಳನ್ನು ಗುರುತಿಸಲು ಡಿಸೆಂಬರ್ 4 ರಂದು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಲು ನಿರ್ಧರಿಸಲಾಯಿತು. ಅಂದಿನಿಂದ ಪ್ರತಿ ವರ್ಷವು ಭಾರತೀಯ ನೌಕಾಪಡೆಯ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.
ಭಾರತೀಯ ನೌಕಾಪಡೆ ದಿನದ ಮಹತ್ವ ಹಾಗೂ ಆಚರಣೆ
ಪ್ರತಿ ವರ್ಷ ಡಿಸೆಂಬರ್ 4 ರಂದು ಆಚರಿಸಲಾಗುವ ಭಾರತೀಯ ನೌಕಾಪಡೆಯ ದಿನದಂದು ನೌಕಾಪಡೆಗೆ ಗೌರವವನ್ನು ಸೂಚಿಸುವುದು ಹಾಗೂ ನೌಕಾಪಡೆಯ ಸೈನಿಕರು ತಮ್ಮ ಜೀವದ ಹಂಗನ್ನು ತೊರೆದು, ದೇಶಕ್ಕಾಗಿ ಹೋರಾಡಿದವರ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವು ಮಹತ್ವದ್ದಾಗಿದೆ.
ಹೆಚ್ಚಿನ ಮಾಹಿತಿಗಾಗಿ 9449823444 ಸಂಖ್ಯೆಯನ್ನು ಸಂಪರ್ಕಿಸಬಹುದು.
0 ಕಾಮೆಂಟ್‌ಗಳು