ಎಲೆಕೆರೆ, ಡಾಮಡಹಳ್ಳಿ ಗ್ರಾಮದ ನೂರಾರು ಯುವಕರು ಜೆಡಿಎಸ್ ಸೇರ್ಪಡೆ
ಏಪ್ರಿಲ್ 24, 2023
ಪಾಂಡವಪುರ: ತಾಲೂಕಿನ
ಎಲೆಕೆರೆ ಡಾಮಡಹಳ್ಳಿ ಗ್ರಾಮದ ನೂರಾರು ಯುವಕರು ರೈತಸಂಘ ಮತ್ತು ಬಿಜೆಪಿ ತೊರೆದು ಜೆಡಿಎಸ್ ಮುಖಂಡರಾದ
ಶಿವರಾಜು ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಯಾದರು. ಭಾನುವಾರ ಸಂಜೆ ಎಲೆಕೆರೆ
ಗ್ರಾಮದಲ್ಲಿ ಮುಖಂಡರಾದ ಸಮಿಉಲ್ಲಾ ನೇತೃತ್ವದಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಗ್ರಾಮದ ಜಾವೀದ್ ಪಾಷ, ಇಮ್ರಾನ್ ಶರೀಫ್, ರಿಜ್ವಾನ್ ಶರೀಫ್, ತೋಫಿಖ್, ರಫೀಖ್,
ನಿಜಾಮ್ ಪಾಷ, ಚಂದ್ರ, ಕುಮಾರ, ಶರತ್, ರಾಮ್ ಸಿಂಗ್, ಅನಿಲ್ ಸಿಂಗ್, ರೋಷನ್, ರಾಮು, ಸನಾವುಲ್ಲಾ,
ಇಮ್ರಾನ್ ಪಾಷ, ಖಲೀಲ್, ಅಜರ್, ಸ್ವಾಮಿ, ಮಹೇಶ್, ಸತೀಶ್, ಮಂಜು, ಶಾಹೀಲ್, ಮುಂತಾದವರು ವಿವಿಧ ಪಕ್ಷಗಳನ್ನು
ತೊರೆದು ಜಾತ್ಯತೀತ ಜನತಾ ಪಕ್ಷಕ್ಕೆ ಸೇರ್ಪಡೆಗೊಂಡರು. ಇವರುಗಳಲ್ಲಿ ಪ್ರಮುಖವಾಗಿ ಪಾಂಡವಪುರ ಟೌನ್ ನಾಲ್ಕನೇ ವಾರ್ಡ್ನ ಫಯಾಸ್
ಪಾಷ ರೈತಸಂಘ ತೊರೆದು ಜೆಡಿಎಸ್ ಸೇರ್ಪಡೆಯಾದರೇ, ಕಟ್ಟೇರಿ ರಾಮ್ ಜಿಅವರು ಬಿಜೆಪಿ ತೊರೆದು ಜೆಡಿ ಎಸ್ ಸೇರ್ಪಡೆಯಾದರು.
ಪಕ್ಷಕ್ಕೆ ಸೇರಿದವರನ್ನು ಜೆಡಿಎಸ್ ಮುಖಂಡ ಶಾಸಕ ಸಿ.ಎಸ್.ಪುಟ್ಟರಾಜು
ಅವರ ಪುತ್ರ ಶಿವರಾಜು ಜೆಡಿಎಸ್ ಪಕ್ಷದ ಶಾಲು ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಟ್ಟೇರಿ ರಾಮ್ ಜಿ ಅವರು ಮಾತನಾಡಿ, ಜಾತ್ಯತೀತ ಜನತಾದಳ
ಪಕ್ಷದ ಪಂಚರತ್ನ ಕಾರ್ಯಕ್ರಮಗಳಿಂದ ನಾವು ಪ್ರಭಾವಿತರಾಗಿದ್ದೇವೆ. ಬಿಜೆಪಿ ಸರ್ಕಾರದ ದುರಾಡಳಿತದಿಂದ
ಬೇಸತ್ತು ಜೆಡಿಎಸ್ ಸೇರ್ಪಡೆಯಾಗಿ ಶಾಸಕ ಸಿ.ಎಸ್.ಪುಟ್ಟರಾಜು ಅವರ ಗೆಲುವಿಗಾಗಿ ಸಂಘಟನೆ ಮಾಡುತ್ತೆವೆ
ಎಂದರು. ಫಯಾಸ್ ಪಾಷ ಅವರು ಮಾತನಾಡಿ, ಶಾಸಕ ಸಿ.ಎಸ್.ಪುಟ್ಟರಾಜು ಅವರು ಮೇಲುಕೋಟೆ
ವಿಧಾನಸಭಾ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಹೀಗಾಗಿ ನಾವು ಮತ್ತೊಮ್ಮೆ
ಅವರನ್ನು ಗೆಲ್ಲಿಸಲು ಜೆಡಿಎಸ್ ಸೇರಿದ್ದಾಗಿ ಹೇಳಿದರು. ಜೆಡಿಎಸ್ ಮುಖಂಡ ಸಮಿಉಲ್ಲಾ ಅವರು ಮಾತನಾಡಿ, ಮೇಲುಕೋಟೆ ವಿಧಾನಸಭಾ
ಕ್ಷೇತ್ರದಲ್ಲಿ ಅಭಿವೃದ್ಧಿ ಪರ್ವವನ್ನೆ ಹರಿಸಲಾಗಿದೆ. ನೀರಾವರಿ, ರಸ್ತೆ, ವಿವಿಧ ಭವನಗಳು ನಿರ್ಮಿಸಲಾಗಿದೆ.
ಮೇಲುಕೋಟೆ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವ ಶಾಸಕರ ಒತ್ತಾಸೆಗೆ ಗೆಲುವು ಸಿಗಲಿದೆ
ಎಂದರು. ಇದೇ ಸಂದರ್ಭದಲ್ಲಿ ಎಲೆಕೆರೆ ಹರೀಶ್ ಸೇರಿದಂತೆ ಗ್ರಾಮದ ಮುಖಂಡರು ಶಿವರಾಜು
ಅವರನ್ನು ಸನ್ಮಾನಿಸಿದರು. ನೂರಾರು ಮಹಿಳೆಯರೂ ಸಹಾ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು
ವಿಶೇಷವಾಗಿತ್ತು.
0 ಕಾಮೆಂಟ್‌ಗಳು