ಲಾರಿ ಹರಿದು ಯುವಕನ ದಾರುಣ ಸಾವು

ಹಾಸನ: ಟಿಪ್ಪರ್ ಲಾರಿ ಹರಿದು ಯುವಕನೊಬ್ಬ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಬೇಲೂರು ಹೊರ ವಲಯದ ಬಿಕ್ಕೋಡು ರಸ್ತೆಯಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಬೇಲೂರು ತಾಲ್ಲೂಕಿನ ಆಲೂರು ಗ್ರಾಮದ ೨೬ ವರ್ಷದ ಕಿರಣ್ ಸಾವನ್ನಪ್ಪಿದ ದುರ್ದೈವಿ ಯುವಕ.
ಇಂದು ಬೆಳಿಗ್ಗೆ ತನ್ನ ಬೈಕ್ನಲ್ಲಿ ಕೆಲಸಕ್ಕೆ ತೆರಳುವಾಗ ಎದುರಿನಿಂದ ಬಂದ ಕಂಟೈನರ್‌ ಕಿರಣ್ ಬೈಕ್‌ಗೆ ತಗುಲಿ ಈತ ಕೆಳಕ್ಕೆ ಬಿದ್ದಾಗ ಹಿಂಬದಿಯಿಂದ ಬರುತ್ತಿದ್ದ ಟಿಪ್ಪರ್ ಲಾರಿ ಈತನ ತಲೆಯ ಮೇಲೆ ಹರಿದು ದುರ್ಘಟನೆ ಸಂಭವಿಸಿದೆ. ಅಪಘಾತ ನಡೆದ ಸ್ಥಳದಲ್ಲಿ ರಕ್ತ ಚೆಲ್ಲಾಪಿಲ್ಲಿಯಾಗಿ ಹರಿದಿತ್ತು. ಮೃತ ಕಿರಣ್‌ ಎರಡು ವರ್ಷದ ಹಿಂದೆ ವಿವಾಹವಾಗಿದ್ದ ಎನ್ನಲಾಗಿದೆ.
ಬೇಲೂರು ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು