ಮೈಸೂರು ಧರ್ಮಕ್ಷೇತ್ರ ಕ್ರೈಸ್ತರ ಒಗ್ಗಟ್ಟು ಪ್ರದರ್ಶನ : ಸೆಂಟ್ ಫಿಲೋಮಿನಾ ಚರ್ಚ್‍ನಿಂದ ಬಿಷಪ್ ಹೌಸ್‍ಗೆ ಬೃಹತ್ ರ್ಯಾಲಿ
ಫೆಬ್ರವರಿ 05, 2023
ವರದಿ-ನಜೀರ್ ಅಹಮದ್ ಮೈಸೂರು: ಇತ್ತೀಚೆಗೆ ಕೆಲವರು ಮೈಸೂರು ಕ್ರೈಸ್ತ ಧರ್ಮಕ್ಷೇತ್ರ ಆಡಳಿತದ ವಿರುದ್ಧ ಅಪಪ್ರಚಾರ ನಡೆಸುತ್ತಿರುವುದನ್ನು ಖಂಡಿಸಿ ಸಾವಿರಾರು ಕ್ರೈಸ್ತ ಬಂಧುಗಳು ಭಾನುವಾರ ಮದ್ಯಾಹ್ನ ಬೃಹತ್ ರ್ಯಾಲಿ ನಡೆಸಿ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು. ಮೈಸೂರು, ಮಂಡ್ಯ, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಯಿಂದ ಆಗಮಿಸಿದ ನಾಲ್ಕು ಸಾವಿರಕ್ಕಿಂತಲೂ ಅಧಿಕ ಕ್ರೈಸ್ತ ಬಂಧುಗಳು ನಗರದ ಸೆಂಟ್ ಫಿಲೋಮಿನಾ ಚರ್ಚ್‍ಬಳಿ ಜಮಾವಣೆಗೊಂಡು ಸಂಜೆ ಸುಮಾರು 4 ಗಂಟೆಗೆ ಜನಧ್ವನಿ ಸಂಘಟನೆ ಸಹೋಗದಲ್ಲಿ ಚರ್ಚ್‍ನಿಂದ ಬನ್ನಿಮಂಟಪದ ಬಳಿಯ ಬಿಷಪ್ ಹೌಸ್ ತನಕ ಕಾಲ್ನಡಿಗೆ ಜಾಥಾ ನಡೆಸಿ ತಾವು ಮೈಸೂರು ಧರ್ಮಕ್ಷೇತ್ರದ ಬೆಂಬಲಕ್ಕಿದ್ದೇವೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಜನಧ್ವನಿ ಸಂಚಾಲಕ ಮ್ಯಾಥ್ಯೂ ಬೆಂಜಮಿನ್ ಸುರೇಶ್ ಮಾತನಾಡಿ, ಕ್ರೈಸ್ತ ಸಮುದಾಯದ ಒಗ್ಗಟ್ಟನ್ನು ಮುರಿಯಲು ಕೆಲವು ದುಷ್ಟಶಕ್ತಿಗಳು ನಮ್ಮವರನ್ನೇ ಬಳಸಿಕೊಂಡು ಮೈಸೂರು ಧರ್ಮಕ್ಷೇತ್ರದ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದ್ದಾರೆ. ಕಾಯಕವನ್ನೆ ನಂಬಿಕೊಂಡು ಬದುಕುತ್ತಿರುವ ಮುಗ್ದ ಕ್ರೈಸ್ತ ಸಮುದಾಯದ ದಿಕ್ಕು ತಪ್ಪಿಸುವ ಸಂಚು ನಡೆಯುತ್ತಿದೆ. ಈ ಬಗ್ಗೆ ಹಿರಿಯ ಧರ್ಮಗುರುಗಳು ಕ್ರಮ ಜರುಗಿಸುತ್ತಾರೆಂದು ನಂಬಿ ನಾವು ಯಾವುದೇ ಪ್ರತಿರೋಧ ನೀಡದೆ ಸುಮ್ಮನಿದ್ದೆವು. ಆದರೇ, ಮೈಸೂರು ಬಿಷಪ್ ಕನ್ನಿಕಾದಾಸ್ ವಿಲಿಯಂ ಅವರು ವೈಯುಕ್ತಿಕ ಕಾರಣದಿಂದ ರಜೆ ಮೇಲೆ ತೆರಳಿರುವುದನ್ನೆ ನೆಪ ಮಾಡಿಕೊಂಡು ಅವರ ವಿರುದ್ಧ ವೈಯುಕಿಕ್ತ ದಾಳಿ ನಡೆಸಿತ್ತಿರುವುದರಿಂದ ಸಮುದಾಯಕ್ಕೆ ಅಪಮಾನವಾಗಿ ನಾವು ತಲೆ ತಗ್ಗಿಸುವಂತಾಗಿದೆ. ಈ ಕಾರಣದಿಂದ ಅಪಪ್ರಚಾರಕರ ನಡೆಯನ್ನು ಖಂಡಿಸಿ ಮೈಸೂರು ಧರ್ಮಕ್ಷೇತ್ರಕ್ಕೆ ಸೇರಿದ ನಾಲ್ಕು ಜಿಲ್ಲೆಗಳ ಸಾವಿರಾರು ಸಮುದಾಯದ ಬಂಧುಗಳ ಇಂದು ಜನಧ್ವನಿ ಘೋಷವಾಕ್ಯದಡಿ ಬೃಹತ್ ರ್ಯಾಲಿ ನಡೆಸಿ ನಾವೆಲ್ಲರೂ ಅಪಪ್ರಚಾರಕ್ಕೆ ಕಿವಿಗೊಡುವವುದಿಲ್ಲ. ಮೈಸೂರು ಧರ್ಮಕ್ಷೇತ್ರದ ಜತೆಗಿದ್ದೇವೆ ಎಂದು ಸಾರಲು ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದೇವೆ ಎಂದರು.
ಸಂಜೆ 4 ಗಂಟೆಗೆ ಪ್ರಾರಂಭವಾದ ಕಾಲ್ನಡಿಗೆ ಜಾಥಾ ಅಶೋಕಾ ರಸ್ತೆ, ಎಲ್‍ಐಸಿ ಸರ್ಕಲ್ ಮೂಲಕ ನೆಲ್ಸನ್ ಮಂಡೇಲಾ ರಸ್ತೆಯಲ್ಲಿ ಸಾಗಿ ಬಿಷಪ್ ಹೌಸ್ ತಲುಪಿತು. ಅನಂತರ ಕ್ರೈಸ್ತ ಮುಖಂಡರು. ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ ಬರ್ನಾಡ್ ಮೋರಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಮೆರವಣಿಗೆ ಶಾಂತಿಯುತವಾಗಿತ್ತು, ರಸ್ತೆ ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗದಂತೆ ಪೊಲೀಸರು ಕ್ರಮ ಕೈಗೊಂಡಿದ್ದರು. ಮೆರವಣಿಗೆ ಉದ್ದಕ್ಕೂ ಕ್ರೈಸ್ತ ಬಂಧುಗಳು ಪ್ರಾರ್ಥನೆ ನಡೆಸಿದರು. ಮೊದಲ ಸಾಲಿನಲ್ಲಿ ಧರ್ಮಗುರುಗಳು, ಆನಂತರ ಕ್ರೈಸ್ತ ಸನ್ಯಾಸಿನಿಯರು ನಂತರ ಸಮುದಾಯದ ಬಂಧುಗಳು, ಯುವಕ, ಯುವತಿಯರು, ಅಬಾಲ ವೃದ್ಧರಾದಿಯಾಗಿ ಮೆರವಣಿಯಲ್ಲೆ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಆನಧ್ವನಿ ಸಂಚಾಲಕರಾದ ಪ್ರೇಮಾನಂದ್ ಡಿಮೆಲ್ಲೋ, ಎಮಿಲಿ, ಎ.ಕ್ಸೇವಿಯರ್, ಜೇಮ್ಸ್, ಜಾನ್ ಡಿಸೋಜಾ ಮುಂತಾದವರು ನೇತೃತ್ವ ವಹಿಸಿದ್ದರು.
ಕೆ.ವಿಲಿಯಂ ಬಿಷಪ್ ಆದ ಬಳಿಕ ಮೈಸೂರು ಧರ್ಮಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಗಳು, ಅಭಿವೃದ್ಧಿಗಳು ಜರುಗಿವೆ. ಆಡಳಿತ ಮತ್ತು ಹಣಕಾಸು ವಿಚಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲಾಗಿತ್ತು. ಇದರಿಂದ ಕೆಲವರ ಅಕ್ರಮ ವ್ಯವಹಾರಕ್ಕೆ ಕಡಿವಾಣ ಬಿದ್ದ ಕಾರಣ. ಅವರು ಬಿಷಪ್ ವಿರುದ್ಧ ಅಪಪ್ರಚಾರಕ್ಕೆ ನಿಂತಿದ್ದಾರೆ. ಮ್ಯಾಥ್ಯೂ ಬೆಂಜಮಿನ್ ಸುರೇಶ್, ಸಂಚಾಲಕ
0 ಕಾಮೆಂಟ್‌ಗಳು