ಭಾರತದಲ್ಲಿ ಕ್ಯಾನ್ಸರ್‍ನಿಂದ 2 ವರ್ಷದಲ್ಲಿ 22 ಲಕ್ಷ ಜನ ಸಾವು : ಡಾ.ಅಜಯ್ ಕುಮಾರ್ ಆತಂಕ

ಭಾರತ್ ಆಸ್ಪತ್ರೆಯಿಂದ ಕ್ಯಾನ್ಸರ್ ರೋಗದ ಬಗ್ಗೆ ಹೋಪಥಾನ್ ಮೂಲಕ ಜಾಗೃತಿ

ಮೈಸೂರು: ಭಾರತದಲ್ಲಿ ಕ್ಯಾನ್ಸರ್ ರೋಗದಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, 2018 ರಿಂದ 2020ರ ವೇಳೆಯಲ್ಲಿ ಕ್ಯಾನ್ಸರ್‍ನಿಂದಾಗಿ 22 ಲಕ್ಷ ಜನರು ಸಾವನ್ನಪ್ಪಿದ್ದಾರೆ. ದುರದೃಷ್ಟವಶಾತ್, ಈ ಸಂಖ್ಯೆ ಹೆಚ್ಚುತ್ತಲೇ ಇದೆ ಎಂದು ಹಿರಿಯ ಕ್ಯಾನ್ಸರ್ ತಜ್ಞ, ಭಾರತ್ ಹಾಸ್ಪಿಟಲ್ ಮತ್ತು ಇನ್ಸ್‍ಟಿಟ್ಯೂಟ್ ಆಫ್ ಆಂಕಾಲಜಿಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಎಚ್‍ಸಿಜಿ ಹಾಸ್ಪಿಟಲ್‍ನ ಚೇರ್‍ಮೆನ್ ಡಾ.ಅಜಯ್ ಕುಮಾರ್ ಆತಂಕ ವ್ಯಕ್ತಪಡಿಸಿದರು. 
ವಿಶ್ವ ಕ್ಯಾನ್ಸರ್ ದಿನಾಚರಣೆ ಪ್ರಯುಕ್ತ ಭಾರತ್ ಹಾಸ್ಪಿಟಲ್ ಮತ್ತು ಇನ್ಸ್‍ಟಿಟ್ಯೂಟ್ ಆಫ್ ಆಂಕಾಲಜಿ, ಸೈಕಲ್ ಪ್ಯೂರ್ ಅಗರಬತಿ ಸಂಸ್ಥ್ತೆ ಸಹಯೋಗದಲ್ಲಿ ನಗರದ ಅರಮನೆ ಬಳಿಯ ಕೋಟೆ ಆಂಜನೇಸ್ವಾಮಿ ದೇವಸ್ಥಾನ ಬಳಿಯಿಂದ ಏರ್ಪಡಿಸಿದ್ದ ಹೋಪಥಾನ್ ಟಾರ್ಚ್ ಲೈಟ್ ಪೆರೇಡ್ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು.  
ಕ್ಯಾನ್ಸರ್ ರೋಗ ಕರ್ನಾಟದಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚಿದೆ. 2021 ರಲ್ಲಿ ಕೇವಲ 90 ಸಾವಿರ ಪ್ರಕರಣಗಳಿದ್ದವು. ಐಸಿಎಂಆರ್‍ನ ವರದಿಯೊಂದರ ಪ್ರಕಾರ ಕರ್ನಾಟಕದಲ್ಲಿ 2025ರ ವೇಳೆಗೆ ಇನ್ನೂ 90 ಸಾವಿರ ಕ್ಯಾನ್ಸರ್ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ ಎಂದು ಡಾ.ಬಿ.ಎಸ್.ಅಜ0iÀiï ಕುಮಾರ್ ಹೇಳಿದರು.   
2022ರಲ್ಲಿ ಭಾರತದಲ್ಲಿ ಕೇವಲ 14.16 ಲಕ್ಷ ಜನರಲ್ಲಿ ಕ್ಯಾನ್ಸರ್ ಕಾಣಿಸಿಕೊಂಡಿದೆ. ದೇಶದಲ್ಲಿನ ಸಾವಿಗೆ ಕ್ಯಾನ್ಸರ್ ಪ್ರಮುಖ ಕಾರಣವಾಗಿದೆ. 2018ರಿಂದ 2020ರ ವೇಳೆಯಲ್ಲಿ ಕ್ಯಾನ್ಸರ್‍ನಿಂದಾಗಿ 22 ಲಕ್ಷ ಜನರು ಸಾವನ್ನಪ್ಪಿದ್ದಾರೆ. ದುರದೃಷ್ಟವಶಾತ್, ಈ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. 2025ರ ವೇಳೆಗೆ ಭಾರತದಲ್ಲಿ 29 ಮಿಲಿಯನ್ ಜನರು ಕ್ಯಾನ್ಸರ್‍ಗೆ ತುತ್ತಾಗುತ್ತಾರೆ. ನಾವು ಎಚ್‍ಸಿಜಿ ಹಾಗೂ ಬಿಎಚ್‍ಐಒ ನಲ್ಲಿ ದಿನವೂ ಹೆಚ್ಚು ಹೆಚ್ಚು ಕ್ಯಾನ್ಸರ್ ಪ್ರಕರಣಗಳನ್ನು ನೋಡುತ್ತೇವೆ. ಓರ್ವ ಕ್ಯಾನ್ಸರ್ ತಜ್ಞನಾಗಿ ಕ್ಯಾನ್ಸರ್‍ಗೆ ಪ್ರಮುಖ ಕಾರಣ ತಂಬಾಕು ಎಂದು ತಿಳಿಸಲು ಇಚ್ಛಿಸುತ್ತೇನೆ. ಧೂಮಪಾನ ಮಾಡುವವರಿಗೆ ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿಕೊಳ್ಳುವ ಸಂಭವ ಹೆಚ್ಚು. ಭಾರತದಲ್ಲಿ ಪ್ರತಿ ಗಂಟೆಗೆ 150 ಜನರು ಹಾಗೂ ಪ್ರತಿದಿನವೂ 3,500 ಜನರು ಧೂಮಪಾನದಿಂದ ಸಾವಿಗೆ ತುತ್ತಾಗುತ್ತಾರೆ. ಪ್ರತಿವರ್ಷ ತಂಬಾಕು ಹದಿಮೂರು ಲಕ್ಷ ಭಾರತೀಯರನ್ನು ಕೊಲ್ಲುತ್ತಿದೆ. ಪ್ರಪಂಚದಾದ್ಯಂತ 26 ಕ್ಯಾನ್ಸರ್ ಆಸ್ಪತ್ರೆಗಳನ್ನು ಹೊಂದಿರುವ ನಾವು  ತಂಬಾಕು ನಿಷೇಧಕ್ಕೆ ಬೆಂಬಲ ಸೂಚಿಸುತ್ತೇನೆ. ಕೇವಲ ತಂಬಾಕು ನಿಯಂತ್ರಣದಿಂದ ಪ್ರಯೋಜನವಾಗುವುದಿಲ್ಲ. ತಂಬಾಕು ನಿಷೇಧವಾದರೆ ಮಾತ್ರ ಸಮಸ್ಯೆ ಪರಿಹಾರವಾಗುತ್ತದೆ ಎಂದರು. 
ಮೈಸೂರಿನಲ್ಲಿ ಆಗಾಗ ತಂಬಾಕು ನಿಷೇಧಕ್ಕೆ ಒತ್ತಾಯಿಸಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸುವ ಮೂಲಕ ಇಡೀ ದೇಶಕ್ಕೆ ಮಾದರಿಯಾಗಬೇಕು. ನ್ಯೂಜಿಲ್ಯಾಂಡ್ ಮಾದರಿಯಲ್ಲಿ ತಂಬಾಕು ಸೇವನೆಗೆ ಇರುವ ವಯೋಮಿತಿಯನ್ನು ಏರಿಸಬೇಕು. ಆಗ ಮುಂದಿನ ಪೀಳಿಗೆಯವರನ್ನು ಕ್ಯಾನ್ಸರ್‍ನಿಂದ ದೂರ ಇಡಬಹುದು. ಮೈಸೂರಿನ ಎಲ್ಲ ಸಾರ್ವಜನಿಕ ಸ್ಥಳಗಳನ್ನೂ ತಂಬಾಕು ಮುಕ್ತ ಮಾಡಬೇಕು. ತಂಬಾಕು ಸೇವನೆಯಿಂದಾಗುವ ಪರಿಣಾಮಗಳ ಬಗ್ಗೆ ಯುವಜನರಲ್ಲಿ ಅರಿವು ಮೂಡಿಸಬೇಕು. ತಂಬಾಕು ಜಾಹೀರಾತುಗಳನ್ನು ನಿಷೇಧಿಸಬೇಕು. ಈ ನಿಟ್ಟಿನಲ್ಲಿ ಜನರ ಸಹಕಾರ ಬೇಕು ಎಂದು ಡಾ.ಅಜಯ್ ಕುಮಾರ್ ತಿಳಿಸಿದರು.

ಸೈಕಲ್ ಪ್ಯೂರ್ ಅಗರಬತ್ತಿಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್ ರಂಗ ಮಾತನಾಡಿ, ಹೋಪಥಾನ್‍ನಂತಹ ಉತ್ತಮ ಕಾರ್ಯಕ್ರಮಕ್ಕೆ ಕೈಜೋಡಿಸಲು ಖುಷಿಯಾಗುತ್ತದೆ. ಈ ಮೂಲಕ ನಾವು ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುತ್ತಿದ್ದೇವೆ. ಕ್ಯಾನ್ಸರ್‍ನಂತಹ ಆಕ್ರಮಣಕಾರಿ ರೋಗದ ವಿರುದ್ಧ ಸೆಣೆಸಬಹುದು ಭಾರತ್ ಆಸ್ಪತ್ರೆಯು ಜನರ ಜೀವನವನ್ನು ಉತ್ತಮಗೊಳಿಸಲು ಮಾಡುತ್ತಿರುವ ಈ ಪ್ರಯತ್ನ ಶ್ಲಾಘನೀಯ. ಎಲ್ಲರೂ ಈ ಸಾರ್ಥಕ ಕಾರ್ಯದಲ್ಲಿ ಕೈಜೋಡಿಸಿ ನಮ್ಮ ದೇಶದ ಭವಿಷ್ಯವನ್ನು ಕ್ಯಾನ್ಸರ್ ಮುಕ್ತ ಮಾಡೋಣ ಎಂದರು. 
ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಕಾರ್ಯಕ್ರಮದಲ್ಲಿದ್ದರು. ಪೆÇಲೀಸ್ ಟ್ರೈನಿಂಗ್ ಶಾಲೆಯ ಪ್ರಾಂಶುಪಾಲರಾದ ಗೀತಾ ಪ್ರಸನ್ನ, ಭಾರತ್ ಹಾಸ್ಪಿಟಲ್ ಮತ್ತು ಇನ್ಸ್‍ಟಿಟ್ಯೂಟ್ ಆಫ್ ಆಂಕಾಲಜಿಯ ಹಿರಿಯ ರೇಡಿಯೇಷನ್ ಆಂಕಾಲಜಿಸ್ಟ್ ಡಾ.ವೈ.ಎಸ್.ಮಾಧವಿ, ಸೆಂಟರ್ ಮ್ಯಾನೇಜರ್ ನಿರ್ಮಲಾ ಕೆ.ಮೂರ್ತಿ ಮತ್ತಿತರರು ಹಾಜರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು