ಮೈಸೂರು ಪೊಲೀಸರ ಕಾರ್ಯಾಚರಣೆ: ಆರೋಪಿಗಳ ಬಂಧನ, ಅಪಾರ ಪ್ರಮಾಣದ ಚಿನ್ನಾಭರಣ, ನಗದು ವಶ
ಜನವರಿ 09, 2023
ಮೈಸೂರು: ಟಿ.ನರಸೀಪುರ ಪಟ್ಟಣದ ಶ್ರೀನಿಧಿ ಡಿಸ್ಟ್ರಿಬ್ಯೂಟರ್ ಮಾಲೀಕರ
ಮನೆಯಲ್ಲಿ ಭಾರಿ ಪ್ರಮಾಣದ ಚಿನ್ನ, ಬೆಳ್ಳಿ, ನಗದು ಕಳವು ಮಾಡಿದ್ದ ಒಬ್ಬ ಆರೋಪಿಯನ್ನು ಮೈಸೂರು ಪೊಲೀಸರು
ಬಂಧಿಸುವಲ್ಲಿ ಯಶಸ್ವಿಯಾಗಿದ್ದು,೭೯೧.೫೧೦ ಗ್ರಾಂ ಚಿನ್ನ, ೪೯೯.೨೬೦ ಬೆಳ್ಳಿ ವಶಕ್ಕೆ ಪಡೆದಿರುವುದಾಗಿ
ಮೈಸೂರು ಪೊಲೀಸ್ ವರಿಷ್ಠಾಧಿಕಾರಿ ಸೀಮಾ ಲಟ್ಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಕಳೆದ ವರ್ಷ ಆಗಸ್ಟ್ ೨೧ ರಂದುಟಿ.ನರಸೀಪುರ ಪಟ್ಟಣದ ಶ್ರೀನಿಧಿ ಡಿಸ್ಟ್ರಿಬ್ಯೂಟರ್ ಮಾಲೀಕ
ಶ್ರೀನಿವಾಸ್ ಮನೆಯಲ್ಲಿ ೩ ಕೆಜಿ ೨೫೦ ಗ್ರಾಂ ಚಿನ್ನ, ೧೨ ಕೆ.ಜಿ.ಬೆಳ್ಳಿ, ೩೦ ಲಕ್ಷ ರೂ. ನಗದು ಕಳುವಾಗಿತ್ತು.
ಈ ಬಗ್ಗೆ ಆಗಸ್ಟ್,೨೨ ರಂದು ಶ್ರೀನಿವಾಸ್ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಮೈಸೂರು ಪೊಲೀಸರು ತನಿಖಾ ತಂಡವನ್ನು
ರಚಿಸಿ ಆಂದ್ರ ಪ್ರದೇಶದ ಹಿಂದೂಪುರ, ಪೆನುಕೊಂಡ, ಪುಟ್ಟಬರ್ತಿ, ಧರ್ಮಾವರಂ, ಅನಂತಪುರ, ಹೈದರಾಬಾದ್
ಮುಂತಾದ ಕಡೆ ಶೋಧನೆ ನಡೆಸಿ ಒಬ್ಬ ಆರೋಪಿಯನ್ನು ಬಂಧಿಸಿ ಈತನಿಂದ ಕಳವು ಮಾಲನ್ನು ವಶಕ್ಕೆ ಪಡೆದರು.
ಪ್ರಕರಣದಲ್ಲಿ ಇಬ್ಬರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಕಳವು ಪ್ರಕರಣ ಮಾಸ್ಟರ್ ಮೈಂಡ್ ಆರೋಪಿ
ಹಾಸನದ ಜೈಲಿನಲ್ಲಿದ್ದಾನೆ ಎಂದುಮ ಅವರು ಹೇಳಿದರು. ಪ್ರಕರಣದ ಪತ್ತೆ ಕಾರ್ಯದಲ್ಲಿ ಪೊಲೀಸ್ ಅಧಿಕಾರಿಗಳಾದ ಡಾ.ನಂದಿನಿ,
ಗೋವಿಂದರಾಜು, ಶ್ರೀಕಾಂತ್, ಲಕ್ಷ್ಮಿಕಾಂತ್ ಕೆ.ತಳವಾರ್, ಮಹೇಶ್ ಕುಮಾರ್, ಜಯಪ್ರಕಾಶ್ ಮುಂತಾದವರು
ಭಾಗವಹಿಸಿದ್ದರು.
ಯುವತಿ ವಂಚಿಸಿದ್ದ ಮಹಿಳೆ ಬಂಧನ:
ಮತ್ತೊಂದು ಪ್ರಕರಣದಲ್ಲಿ ನಂಜನಗೂಡು ತಾಲ್ಲೂಕು ಬದನವಾಳು ಗ್ರಾಮದ ಯುವತಿಯೊಬ್ಬಳಿಗೆ ರಾಬರ್ಟ್ ಎಡ್ಗರ್
ಎಂಬ ಇನ್‌ಸ್ಟಾಗ್ರಾಂ ಖಾತೆ ಮೂಲಕ ಪರಿಚಯವಾಗಿ ತಾನು ಯುಕೆ ದೇಶದಲ್ಲಿದ್ದು, ಯುವತಿಗೆ ಐಫೋನ್ ಸೇರಿದಂತೆ
ಎಲೆಕ್ಟ್ರಾನಿಕ್ ವಸ್ತುಗಳನ್ನು ಉಡುಗೊರೆಯಾಗಿ ಕೊಡುವ ನೆಪದಲ್ಲಿ ೪.೭೭ ಲಕ್ಷ ರೂ. ವಂಚನೆ ಮಾಡಿದ್ದ
ಅಸ್ಸಾಂ ಮೂಲದಯುವತಿಯೊಬ್ಬಳನ್ನು ಬಂಧಿಸಿ ಒಟ್ಟು
೬ ಮೊಬೈಲ್ ಫೋನ್, ೨೬ ಸಾವಿರ ನಗದು ಮತ್ತಿತರ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ವಂಚಕಿಯು ಅಸ್ಸಾಂ ರಾಜ್ಯದ ಕರೀಮ್ ಗಂಜ್ ಜಿಲ್ಲೆಯವರಾಗಿದ್ದು,ಬೆಂಗಳೂರಿನಲ್ಲಿ ಕೆಲಸ ಮಾಡುವಾಗ ಒಬ್ಬ ನೈಜೀರಿಯನ್ ಪ್ರಜೆಯನ್ನು
ಪರಿಚಯ ಮಾಡಿಕೊಂಡು, ತಮ್ಮದೇ ಜಿಲ್ಲೆಯ ಕೆಲವು ವ್ಯಕ್ತಿಗಳ ಜತೆಗೂಡಿ ಅವರ ಹೆಸರಲ್ಲಿ ನಕಲಿ ಆಧಾರ್
ಕಾರ್ಡ್ಸೃಷ್ಟಿಸಿ ಯುವತಿಗೆ ವಂಚನೆ ಮಾಡಿದ್ದಾಗಿ
ತನಿಖೆಯಲ್ಲಿ ತಿಳಿದುಬಂದಿದೆ. ಪ್ರಕರಣದ ಪತ್ತೆ ಕಾರ್ಯದಲ್ಲಿ ಶಬ್ಬೀರ್ ಹುಸೇನ್, ಲೋಕೇಶ್, ಸಿಬ್ಬಂದಿಗಳಾದ ಮಂಜುನಾಥ, ರಂಗಸ್ವಾಮಿ, ಮಂಜುನಾಥ ಬಿ.ಪಿ., ಮಹದೇವಸ್ವಾಮಿ,
ವೆಂಕಟೇಶ, ಮಹೇಶ, ಮಹೇಶ ಕುಮಾರ, ಅಭಿಷೇಕ್, ಆದರ್ಶ, ಸಿಂಧು ಭಾಗವಹಿಸಿದ್ದರು. ಎರಡೂ ಪ್ರಕರಣಗಳ ಪತ್ತೆ ಕಾರ್ಯವನ್ನು ಪೊಲೀಸ್ ವರಿಷ್ಠಾಧಿಕಾರಿ ಸೀಮಾ
ಲಟ್ಕರ್ ಶ್ಲಾಘಿಸಿದ್ದಾರೆ.
0 ಕಾಮೆಂಟ್‌ಗಳು