ನಗರದ ಸಾತಗಳ್ಳಿ-ಹಂಚ್ಯಾ ಬಿ ವಲಯದಲ್ಲಿ ರಾಶಿಗೆ ಪೂಜೆ, ಕಿಚ್ಚು ಹಾಯಿಸಿ ನಲಿದಾಡಿದ ಮಕ್ಕಳು
ಮೈಸೂರು : ಸಂಕ್ರಾಂತಿ ಹಬ್ಬದ ಪ್ರಯುಕ್ತ ನಗರದ ರಿಂಗ್ ರಸ್ತೆಯಲ್ಲಿರುವ ಹಂಚ್ಯಾ ಸಾತಗಲ್ಲಿ ಬಿ ವಲಯದ ಹಂಸವಾಣಿ ಕನ್ನಡ ಬಳಗ ಮತ್ತು ಹಂಸವಾಣಿ ಹಿರಿಯ ನಾಗರಿಕರ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ಸುಗ್ಗಿ ಸಂಭ್ರಮ ಆಚರಿಸಲಾಯಿತು.
ಭಾನುವಾರ ಸಂಜೆ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಉದ್ಯಾನದಲ್ಲಿ ಬಡಾವಣೆಯ ಮಹಿಳೆಯರು ಭತ್ತದ ರಾಶಿಗೆ ಪೂಜೆ ಸಲ್ಲಿಸಿ ಸುಗ್ಗಿ ಸಂಭ್ರಮದಲ್ಲಿ ಭಾಗಿಯಾದರು. ನಗರ ಪ್ರದೇಶದ ಮಕ್ಕಳಿಗೆ ಸಂಕ್ರಾಂತಿ ಹಬ್ಬದ ಸಂಪ್ರದಾಯಗಳನ್ನು ಹಿರಿಯರು ಪರಿಚಯ ಮಾಡಿಕೊಟ್ಟರು. ನಂತರ ಎಳ್ಳು ಬೀರಲಾಯಿತು.
ಸಂಕ್ರಾಂತಿ ಹಬ್ಬದ ಪ್ರಯುಕ್ತ ಕಳೆದ ಎರಡು ದಿನಗಳ ಹಿಂದೆ ಬಡಾವಣೆಯ ಮಕ್ಕಳು ಮತ್ತು ಮಹಿಳೆಯರಿಗೆ ಏರ್ಪಡಿಸಿದ್ದ ವಿವಿಧ ಆಟೋಟಗಳಲ್ಲಿ ವಿಜೇತರಾದವರಿಗೆ ಬಡಾವಣೆಯ ಹಿರಿಯರು ಬಹುಮಾನ ವಿತರಿಸಿದರು.
ನಂತರ ಕಿಚ್ಚು ಹಾಕಿ ಹಸು ಮತ್ತು ದನಗಳನ್ನು ಹಾಯಿಸಲಾಯಿತು. ಈ ವೇಳೆ ಬಡಾವಣೆಯ ಮಕ್ಕಳು ಸುಗ್ಗಿ ಸಂಭ್ರವನ್ನು ಸವಿದರು.
ಈ ಸಂದರ್ಭದಲ್ಲಿ ಸಂಘದ ಪದಾಧಿಕಾರಿಗಳಾದ ಕಾಂತರಾಜ್, ನಟರಾಜ್, ರಂಗರಾಜ್, ನಾಗಸುಂದರ್, ರಾಘವೇಂದ್ರ, ಪ್ರವೀಣ್ ಲಾಡ್, ಅರುಣ್ ಮತ್ತು ಉಭಯ ಬಳಗದ ಎಲ್ಲಾ ಸದಸ್ಯರು, ಹಿರಿಯ ನಾಗರಿಕರು, ಮಹಿಳೆಯರು ಇದ್ದರು.
0 ಕಾಮೆಂಟ್‌ಗಳು