ಮಂಡ್ಯದಲ್ಲಿ ಬಿಎಸ್‍ಪಿ ಅಧಿನಾಯಕಿ ಮಾಯಾವತಿ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ಕಾರ್ಯಕರ್ತರು
ಜನವರಿ 15, 2023
ಮಂಡ್ಯ: ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಅವರ 67ನೇ ಹುಟ್ಟುಹಬ್ಬವನ್ನು ನಗರದ ಸಂಜಯ ವೃತ್ತದಲ್ಲಿ ಮಂಡ್ಯ ಜಿಲ್ಲಾ ಬಹುಜನ ಸಮಾಜ ಪಕ್ಷದ ವತಿಯಿಂದ ಸಂಭ್ರಮದಿಂದ ಆಚರಿಸಲಾಯಿತು. ಸಂಜಯ ವೃತ್ತದಲ್ಲಿ ಜಮಾಯಿಸಿದ ನೂರಾರು ಬಿಎಸ್‍ಪಿ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ನೆಚ್ಚಿನ ನಾಯಕಿ ಮಾಯಾವತಿ ಅವರ ಬೃಹತ್ ಕಟೌಟ್ ಎದುರು ಕೇಕ್ ಕತ್ತರಿಸಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು. ನಂತರ ವೃದ್ಧಾಶ್ರಮಕ್ಕೆ ತೆರಳಿ ಹಣ್ಣು ಹಂಪಲು ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಎಸ್.ಪಿ.ಶಿವಕುಮಾರ್, ವೆಂಕಟೇಶ್, ಮಂಡ್ಯ ತಾಲ್ಲೂಕು ಅಧ್ಯಕ್ಷ ಹಾಗೂ ವಿಧಾನ ಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಅನಿಲ್ ಕುಮಾರ್ ಕೆರೆಗೂಡು, ಮುಖಂಡರಾದ ಯೋಗಾನಂದ, ವೀರಭಧ್ರಯ್ಯ, ನಂಜುಂಡಸ್ವಾಮಿ, ಚಲುವರಾಜು, ಇನ್ನಿತರರು.
0 ಕಾಮೆಂಟ್‌ಗಳು