ಹುಲಿ ಉಗುರು, ಹಲ್ಲು ಸಾಗಾಟ: ಇಬ್ಬರ ಬಂಧನ

ಶಾರುಕ್ ಖಾನ್, ಹನೂರು
ಹನೂರು: ತಾಲ್ಲೂಕಿನ ಪಿಜಿ ಪಾಳ್ಯ ಗ್ರಾಮದ ಅಡ್ಡ ರಸ್ತೆ ಬಳಿ ಆಕ್ರಮವಾಗಿ   ಹುಲಿ ಉಗುರು ಹಾಗೂ ಹಲ್ಲುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅರಣ್ಯ ಸಂಚಾರಿ ದಳದ ಪೊಲೀಸರು ಬಂದಿಸಿದ್ದಾರೆ. 
ಆಂಡೆಕುರುಬರ ದೊಡ್ಡಿ ಗ್ರಾಮದ ಗೋಪಾಲ ಬಿನ್ ದೇವನಾಯಕ, ರಾಯಚೂರು ಜಿಲ್ಲೆ, ಸಿಂದನೂರು ತಾಲ್ಲೂಕು, ಗೋರೆಬಾಳ ಗ್ರಾಮದ ಹನುಮೇಶ ಬಿನ್ ಲೇಟ್ ಹೊನ್ನಪ್ಪ ಬಂಧಿತರು.
ಜನವರಿ 16 ರಂದು ಮಾಹಿತಿ ಮೇರೆಗೆ ಹನೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಿಜಿ ಪಾಳ್ಯ ಗ್ರಾಮದ ಅಡ್ಡರಸ್ತೆ ಬಳಿ ದ್ವಿಚಕ್ರ ವಾಹನದಲ್ಲಿ ಆರೋಪಿಗಳು ಹುಲಿಯ ಉಗುರು ಹಾಗೂ ಹಲ್ಲನ್ನು ಆಕ್ರಮವಾಗಿ ಮಾರಾಟ ಮಾಡಲು ಸಾಗಾಣಿಕೆ ಮಾಡುತ್ತಿದ್ದ ವೇಳೆ ಅರಣ್ಯ ಇಲಾಖೆ ಸಂಚಾರಿ ದಳದ ಪೊಲೀಸರು ದಾಳಿ ನಡೆಸಿ ಬಂಧಿಸಿದರು.
ಬಂಧಿತರಿಂದ 40 ಹುಲಿಯ ಉಗುರುಗಳು ಹಾಗೂ 2 ಹಲ್ಲುಗಳನ್ನು ವಶಕ್ಕೆ ಪಡೆದಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು