ಪಾಂಡವಪುರ : ಹಿರಿಯ ರಾಜಕೀಯ ಧುರೀಣ ಚಿಕ್ಕಾಡೆ ಸಿ.ಅಣ್ಣೇಗೌಡ ನಿಧನ

ಪಾಂಡವಪುರ : ಹಿರಿಯ ರಾಜಕೀಯ ಧುರೀಣ ಮಂಡ್ಯ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಚಿಕ್ಕಾಡೆ ಸಿ.ಅಣ್ಣೇಗೌಡ ಇಂದು ಬೆಳಿಗ್ಗೆ ಪಾಂಡವಪುರದ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಅಣ್ಣೇಗೌಡರಿಗೆ 85 ವರ್ಷ ವಯಸ್ಸಾಗಿತ್ತು. ಕಳೆದ ಮೂರು ವರ್ಷಗಳಿಂದ ಅವರು ಹಾಸಿಗೆ ಹಿಡಿದಿದ್ದರು.
ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. 
ಅಣ್ಣೇಗೌಡರು ತಾಲ್ಲೂಕಿನ ಪ್ರಸಿದ್ಧ ರಾಜಕಾರಣಿ,   ಚಿಕ್ಕಾಡೆ ಸೊಸೈಟಿ ಅಧ್ಯಕ್ಷರಾಗುವ ಮೂಲಕ ರಾಜಕಾರಣ ಪ್ರವೇಶ ಮಾಡಿ ನಂತರ ಪಿಎಸ್‍ಎಸ್‍ಕೆ ಉಪಾಧ್ಯಕ್ಷರಾಗಿ, ಪಾಂಡವಪುರ ತಾಲ್ಲೋಕು  ಬೋರ್ಡ್ ಅಧ್ಯಕ್ಷರಾಗಿ ನಂತರ ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿಯೂ ದೀರ್ಘಕಾಲ ಸೇವೆ ಸಲ್ಲಿಸಿ ಬಳಿಕ ಜಿಲ್ಲಾ ಪಂಚಾಯ್ತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದರು. 
ಇಂದು ಸಂಜೆ ಚಿಕ್ಕಾಡೆ ಗ್ರಾಮದಲ್ಲಿರುವ ಅಣ್ಣೇಗೌಡರ ತೋಟದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು