ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿಷೇಕ : ಹಲವು ರೈತರ ಬಂಧನ, ರಕ್ತಸಿಕ್ತ ಪುತ್ಥಳಿ ವಶ
ಡಿಸೆಂಬರ್ 28, 2022
ಮಂಡ್ಯ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಮೆಗೆ ರಕ್ತಾಭಿμÉೀಕ ಮಾಡುವ ಮೂಲಕ ಮಂಡ್ಯ ಜಿಲ್ಲೆಯ ರೈತರು ವಿಶಿಷ್ಟ ಪ್ರತಿಭಟನೆ ನಡೆಸಿದ್ದು, ಈ ವೇಳೆ ಪೊಲೀಸರು ರೈತರನ್ನು ಬಂಧಿಸಿರುವ ಘಟನೆ ನಡೆದಿದೆ. ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗ ಕಬ್ಬು ಮತ್ತು ಹಾಲಿನ ದರ ಪರಿಷ್ಕರಣೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತಸಂಘ ನಡೆಸುತ್ತಿದ್ದ ಪ್ರತಿಭಟನೆ ಇಂದು 52 ನೇ ದಿನಕ್ಕೆ ಕಾಲಿಟ್ಟಿದ್ದು, ಈ ದಿನ ಪ್ರತಿಭಟನಾ ನಿರತ ರೈತರು ಸರ್ಕಾರದ ಗಮನ ಸೆಳೆಯಲು ತಮ್ಮಗಳ ಕೈ ಕುಯ್ದು ರಕ್ತ ಬಸಿದುಕೊಂಡು ಮುಖ್ಯಮಂತ್ರಿಗಳ ಪುತ್ಥಳಿಗೆ ರಕ್ತಾಭಿಷೇಕ ಮಾಡಿದರು. ಈ ವೇಳೆ ಮದ್ಯ ಪ್ರವೇಶಿಸಿದ ಪೊಲೀಸರು, ರಕ್ತಾಭಿμÉೀಕ ಮಾಡಿದ ರೈತರನ್ನ ಬಂಧಿಸಿ ರಕ್ತಸಿಕ್ತವಾದ ಮುಖ್ಯಮಂತ್ರಿ ಪ್ರತಿಮೆಯನ್ನು ವಶಕ್ಕೆ ಪಡೆದರು.
ಅಲ್ಲದೇ, ಕೇಂದ್ರ ಗೃಹ ಸಚಿವ ಅಮಿತ್ ಶಾ ಆಗಮನದ ಹಿನ್ನೆಲೆ ಪ್ರತಿಭಟನೆಗೆ ಹಾಕಿದ್ದ ಟೆಂಟ್‍ನ್ನು ಪೋಲಿಸರು ತೆರವು ಮಾಡಿದರು. ಈ ವೇಳೆ ರಾಷ್ಟ್ರಪಿತ ಮಹಾತ್ಮಗಾಂಧಿ, ಸಂವಿಧಾನ ಶಿಲ್ಪಿ ಅಂಬೇಡ್ಕರ್ ಮತ್ತು ರೈತ ನಾಯಕರ ಭಾವಚಿತ್ರವನ್ನು ಪೊಲೀಸರು ಬಿಸಾಡಿದ್ದಾರೆಂದು ರೈತರು ಆರೋಪಿಸಿದ್ದು, ಪೊಲೀಸರ ವರ್ತನೆ ಚಿತ್ರೀಕರಿಸುತ್ತಿದ್ದ ರೈತರನ್ನು ಇದೇ ವೇಳೆ ಬಂಧಿಸಲಾಗಿದೆ ಎಂದರು.
ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಧಾವಿಸಿ ಪೊಲೀಸರ ದುರ್ವರ್ತನೆಗೆ ಹರಿಹಾಯ್ದರು. ಪ್ರತಿಭಟನೆಯ ಟೆಂಟ್ ಹಾಕುವ ತನಕ ನಮಗೆ ಬಿಡುಗಡೆ ಮಾಡಿದರೂ ನಾವು ಹೋಗುವುದಿಲ್ಲ ಎಂದು ಪಟ್ಟು ಹಿಡಿದರು.
0 ಕಾಮೆಂಟ್‌ಗಳು