ಅಭಿಮಾನಿಗಳ ಜಯಘೋಷದ ನಡುವೆ ಮುಖ್ಯಮಂತ್ರಿಗಳಿಂದ ಪ್ರಶಂಸೆಗೊಳಗಾದ ಜನಧ್ವನಿ ವೆಂಕಟೇಶ್

 -ಶಾರೂಕ್ ಖಾನ್, ಹನೂರು
ಹನೂರು: ತಾಲ್ಲೂಕಿನಲ್ಲಿ ಭಾರತೀಯ ಜನತಾ ಪಕ್ಷವನ್ನು ತಮ್ಮ ಸಮಾಜ ಸೇವೆ ಮತ್ತು ಕ್ರಿಯಾಶೀಲತೆಯಿಂದ ಸಂಘಟಿಸಿ ಜನಪ್ರಿಯತೆ ಗಳಿಸಿರುವ ಬಿಜೆಪಿ ಮುಖಂಡ ಜನಧ್ವನಿ ವೆಂಕಟೇಶ್ ನಿನ್ನೆ ಹನೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನರ ಜಯಘೋಷದ ನಡುವೆ ಮುಖ್ಯಮಂತ್ರಿಗಳಿಂದಲೂ ಪ್ರಶಂಸೆಗೊಳಗಾದರು.
ಜಿಲ್ಲೆಯ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾರ್ಗದರ್ಶನದಂತೆ ರಾಮಪುರ ಹೋಬಳಿ ವ್ಯಾಪ್ತಿಯ ಕಾರ್ಯಕರ್ತರನ್ನು ಸಂಘಟನೆ ಮಾಡಿ ಕರೆತರುವ ಜವಾಬ್ದಾರಿಯನ್ನು ಹೊತ್ತಿದ್ದ ವೆಂಕಟೇಶ್ ಅದನ್ನು ಯಶಸ್ವಿಯಾಗಿ ಪೂರೈಸಿದರು.
ಸುಮಾರು 88 ಬಸ್ಸುಗಳು.20 ಆಟೋ, 35 ಟಾಟಾ ಸುಮೋ, 4ಕ್ಯಾಂಟರ್, 3 ಲಾರಿ, 10 ಅಶೋಕಾ ಆಟೊಗಳಲ್ಲಿ ಸೇರಿದಂತೆ ಇನ್ನಿತರ ವಾಹನಗಳಲ್ಲಿ ಸುಮಾರು ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರನ್ನು ಸಮಾರಂಭಕ್ಕೆ ಕರೆತಂದಿದ್ದರು.
ಜತೆಗೆ ಸಮಾರಂಭಕ್ಕೆ ಬಂದಿದ್ದ ಕಾರ್ಯಕರ್ತರನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿ 1 ಹನೂರು ಬಾಜಪ ಕಛೇರಿಯ ಹತ್ತಿರ, 2 ಬಂಡಳ್ಳಿ ರಸ್ತೆ , 3 ಡಿ.ಆರ್. ಹಾರ್ಡ್‍ವೆರ್ ಹತ್ತಿರ ಮತ್ತು ಅಜ್ಜಿಪುರ ರಸ್ತೆಯ ಆಂಜನೇಯ ದೇವಸ್ಥಾನದ ಹತ್ತಿರ ಅಚ್ಚುಕಟ್ಟಾಗಿ ಊಟದ ವ್ಯವಸ್ಥೆಯನ್ನು ಮಾಡಿದ್ದರು. ಇದರಿಂದ ಸಂತೋಷಗೊಂಡ ಜನರು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ವೆಂಕಟೇಶ್ ಪರ ಘೋಷಣೆ ಕೂಗಿದರು. ಈ ವೇಳೆ ವೇದಿಕೆಗೆ ತೆರಳಿದ ವೆಂಕಟೇಶ್ ಅವರ ಕಾರ್ಯವೈಖರಿ ಬಗ್ಗೆ ಸಚಿವ ಸೋಮಣ್ಣ ಸಿಎಂ ಅವರಿಗೆ ಹೇಳಿದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವೆಂಕಟೇಶ್‍ಗೆ ಶಹಬ್ಬಾಶ್ ಗಿರಿ ಕೊಟ್ಟಿದ್ದು ಕಂಡುಬಂತು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು