ಸಂತೋಷ ಟಿ.ಬಿ. ಮದ್ದೂರು ಮದ್ದೂರು: ಗ್ರಾಮೀಣ ಭಾಗದ ಜನತೆಯ ಆರೋಗ್ಯದ ಹಿತದೃಷ್ಟಿಯಿಂದ ತಾಲೋಕಿನಾದ್ಯಂತ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದೇನೆ ಎಂದು ಮನ್ ಮುಲ್ ನಿರ್ದೇಶಕ ಹಾಗೂ ಬಿಜೆಪಿ ಮುಖಂಡ ಎಸ್.ಪಿ. ಸ್ವಾಮಿ ತಿಳಿಸಿದರು. ಅಣ್ಣುರು ರಾಮ ಮಂದಿರದ ಆವರಣದಲ್ಲಿ ಶ್ರೀನಿಧಿಗೌಡ ಆದಿ ಚುಂಚನಗಿರಿ ಆಸ್ಪತ್ರೆಯ ಸಹಕಾರದೊಂದಿಗೆ ಅಣ್ಣುರು, ಮೆಣಸಗರೆ ವ್ಯಾಪ್ತಿಯ ಗ್ರಾಮಸ್ಥರಿಗೆ ಉಚಿತ ನೇತ್ರ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾ ಡಿದರು. ಮದ್ದೂರು ಕ್ಷೇತ್ರಾದ್ಯಂತ ಪ್ರತಿ ಎರಡು ಗ್ರಾಪಂ ವ್ಯಾಪ್ತಿಗೆ ಉಚಿತ ನೇತ್ರ ತಪಾಸಣಾ ಶಿಬಿರಗಳನ್ನು ಆಯೋಜಿಸಿ ಶ್ರೀನಿಧಿ ಪ್ರತಿμÁ್ಠನದ ವತಿಯಿಂದ ಉಚಿತ ವಾಹನಗಳ ಮೂಲಕ ಬೆಂಗಳೂರಿನಲ್ಲಿ ನುರಿತ ವೈದ್ಯರಿಂದ ಚಿಕಿತ್ಸೆ ಮತ್ತು ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು ಎಂದರು. 150 ಕ್ಕೂ ಜನರಿಗೆ ತಪಾಸಣೆ ನಡೆಸಲಾಯಿತು. ಗ್ರಾಪಂ ಅಧ್ಯಕ್ಷೆ ನಾಗಮಣಿ ಮಹೇಂದ್ರ, ಜಿಪಂ ಮಾಜಿ ಸದಸ್ಯ ಕೃಷ್ಣೇಗೌಡ, ಗ್ರಾಪಂ ಮಾಜಿ ಅಧ್ಯಕ್ಷ ಕರಡಕೆರೆ ಹನುಮಂತೇಗೌಡ, ರೈತ ಮುಖಂಡರಾದ ಅಣ್ಣುರು ಮಹೇಂದ್ರ, ತಾಪಂ ಮಾಜಿ ಸದಸ್ಯ ದೊಡ್ಡಣ್ಣಯ್ಯ, ಗ್ರಾಪಂ ಸದಸ್ಯ ಮಂಜು, ಡಾಬಾ ಕಿಟ್ಟಿ, ಚಿಕ್ಕರಸಿನಕೆರೆ ಶಿವಲಿಂಗಯ್ಯ ಮುಂತಾದವರು ಇದ್ದರು.
0 ಕಾಮೆಂಟ್‌ಗಳು