ಪತ್ರಕರ್ತರ ಆರೋಗ್ಯ ನಿಧಿ ಮೊತ್ತ 50 ಲಕ್ಷ : ಮೈಸೂರು ಮೇಯರ್ ಶಿವಕುಮಾರ್ ಘೋಷಣೆ

ಮೈಸೂರು ಪತ್ರಕರ್ತರ ವೃತ್ತಿನಿಷ್ಠೆಗೆ ಶ್ಲಾಘನೆ, ಸಂಘದ ಡೈರಿ, ಕ್ಯಾಲೆಂಡರ್ ಬಿಡುಗಡೆ  

ಮೈಸೂರು: ಪತ್ರಕರ್ತರ ವೃತ್ತಿ ಜೀವನ ಸದಾ ಒತ್ತಡದ ನಡುವೆ ಸಾಗುತ್ತಿದ್ದು, ಮೈಸೂರಿನ ಪತ್ರಕರ್ತರು ತಮ್ಮ ಪ್ರಾಮಾಣಿಕತೆ ಹಾಗೂ ವಸ್ತುನಿಷ್ಠ ವರದಿಗಳಿಂದ ಖ್ಯಾತರಾಗಿದ್ದಾರೆ. ಪಾಲಿಕೆಯಲ್ಲಿನ ಪತ್ರಕರ್ತರ ಆರೋಗ್ಯನಿಧಿ ಮೊತ್ತ 27 ಲಕ್ಷದಿಂದ 50 ಲಕ್ಷಕ್ಕೆ ಹೆಚ್ಚಿಸಲಾಗುವುದು ಎಂದು ಮೇಯರ್ ಶಿವಕುಮಾರ್ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಇಂದು ಹಮ್ಮಿಕೊಂಡಿದ್ದ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ 2023ನೇ ಡೈರಿ ಮತ್ತು ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ಪತ್ರಕರ್ತರ ನೆರವಿಗಾಗಿ ಕೋವಿಡ್ ಸಂದರ್ಭದಲ್ಲಿ ನಗರಪಾಲಿಕೆಯಲ್ಲಿ 27 ಲಕ್ಷ ರೂ.ಗಳ ನಿಧಿಯನ್ನು ಸ್ಥಾಪಿಸಲಾಗಿದೆ. ಆ ಮೊತ್ತವನ್ನು ಪತ್ರಕರ್ತರ ಸಂಘದ ಕೋರಿಕೆಯ ಮೇರೆಗೆ 50 ಲಕ್ಷ ರೂ.ಗಳಿಗೆ ಹೆಚ್ಚಿಸಿ  
ಕೋವಿಡ್ ಉದ್ದೇಶಕ್ಕೆ ಮಾತ್ರವಲ್ಲದೆ ಪತ್ರಕರ್ತರ ಇತರ ಅನಾರೋಗ್ಯಗಳ ನಿವಾರಣೆಗೂ ಈ ನಿಧಿ ಬಳಸಲಾಗುವುದು ಎಂದರು.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಯಶಸ್ವಿನಿ ಸೋಮಶೇಖರ್ ಮಾತನಾಡಿ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘಕ್ಕೆ ಸಿ.ಎ. ನಿವೇಶನ ನೀಡಲು ಹಾಗೂ ಪತ್ರಕರ್ತರು ಸ್ವಂತ ಮನೆ ಹೊಂದಲು ಅನುಕೂಲವಾಗುವಂತೆ ಅವರಿಗೆ ಗುಂಪು ಮನೆ ಯೋಜನೆಯಡಿ ಮನೆಗಳನ್ನು ನೀಡುವ ಬಗ್ಗೆ ಸರ್ಕಾರದಿಂದ ಅನುಮೋದನೆ ಪಡೆಯಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು. 
ಅನಾರೋಗ್ಯದಿಂದ ನಿಧನರಾದ ಪತ್ರಕರ್ತರಾದ ರವಿಶಂಕರ್, ಶ್ರೀನಿವಾಸಮೂರ್ತಿ, ರೆಹಮಾನ್ ಖಾನ್, ಮಹೇಶ್ವರನ್ ಅವರ ಕುಟುಂಬದವರಿಗೆ ಪರಿಹಾರ ಧನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು. 

ಮೈಸೂರು ಮಿತ್ರ ಸಂಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ, 
ಡೈರಿ ಮತ್ತು ಕ್ಯಾಲೆಂಡರ್‍ಗಳ ಪ್ರಾಯೋಜಕರಾದ ಸಿದ್ಧಾರ್ಥ ಗ್ರೂಪ್ಸ್‍ನ ಮಾಲೀಕ ಪಿ.ವಿ.ಗಿರಿ.
ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ಪದಾಧಿಕಾರಿಗಳಾದ ಅನುರಾಗ್ ಬಸವರಾಜ್, ನಾಗೇಶ್ ಪಾಣತ್ತಲೆ, ಧರ್ಮಾಪುರ ನಾರಾಯಣ್, ಮಾಜಿ ಅಧ್ಯಕ್ಷ ಸಿ.ಕೆ.ಮಹೇಂದ್ರ, ಉದ್ಯಮಿ ತರುಣ್ ಗಿರಿ, ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷರಾದ ಸಿ.ನಾರಾಯಣಗೌಡ, ಮೈಸೂರು ದಿಗಂತ ಪತ್ರಿಕೆಯ ಸಂಪಾದಕರಾದ ಮಳಲಿ ನಟ ರಾಜಕುಮಾರ್, ಕಾರ್ಯನಿರ್ವಾಹಕ ಸಂಪಾದಕ ಘನವಂತ ಮಳಲಿ ಮುಖ್ಯ ವರದಿಗಾರ ಕಿರಗುಂದ ಶೇಖರ್ 

 ಸಮಾರಂಭದಲ್ಲಿ ಪಾಲ್ಗೊಂಡಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು