ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆ.ಹೊನ್ನಲಗೆರೆ ಆರ್.ಕೆ. ಶಾಲೆ ಪ್ರಥಮ

-ಟಿ.ಬಿ.ಸಂತೋಷ್, ಮದ್ದೂರು

ಮದ್ದೂರು : ತಾಲೂಕಿನ ಭಾರತೀನಗರ ಸಮೀಪದ ಮೆಣಸಗೆರೆ ಗ್ರಾಮದ ಜ್ಞಾನ ಮುದ್ರಾ ಶಾಲೆಯಲ್ಲಿ ಇನ್ನರ್ ವೀಲ್ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಂತರ ಶಾಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕೆ. ಹೊನ್ನಲಗೆರೆ ಆರ್‍ಕೆ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದ್ದಾರೆ. 
ವಿದ್ಯಾರ್ಥಿಗಳಾದ ಜಯಂತ್ ಕುಮಾರ್ ಕೆ.ಎಸ್., ಧಾನ್ವಿ ಆರ್ ಗೌಡ., ಲಿಖಿತ್ ಗೌಡ ಕೆ.ಆರ್., ಸಮರ್ಥ್ ಕೆ ಅವರು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಭಾರತೀನಗರದ ಸ್ನೇಹಾ ಶಾಲೆಯ ವಿದ್ಯಾರ್ಥಿಗಳು ದ್ವಿತೀಯ ಸ್ಥಾನ ಪಡೆದರು.
ಆರ್‍ಕೆ ವಿದ್ಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ವಿನಯ್ ರಾಮಕೃಷ್ಣ, ಆಡಳಿತಾಧಿಕಾರಿ ಎಂ.ಎಸ್. ಮರಿಸ್ವಾಮಿಗೌಡ, ಮುಖ್ಯ ಶಿಕ್ಷಕಿ ಡಿ.ಕಲ್ಯಾಣಿ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು