ಪ್ರತಿಭಾ ಕಾರಂಜಿಯಲ್ಲಿ ಕೆಪಿಎಸ್ ಶಾಲೆಯ ವಿಸ್ಮಿತಾ ಸಿ.ಶೇಖರ್ ಗೆ ಪ್ರಥಮ ಬಹುಮಾನ

ಪಾಂಡವಪುರ : ತಾಲ್ಲೂಕಿನ ಬೇಬಿ ಗ್ರಾಮದ ಡಿಎಂಎಸ್ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ನಡೆದ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕರ್ನಾಟಕ ಪಬ್ಲಿಕ್ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ವಿಸ್ಮಿತಾ ಸಿ. ಶೇಖರ್ ಕತೆ ಹೇಳುವ ಮತ್ತು ಭಾಷಣ ಸ್ವರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ.
ಜತೆಗೆ ಇಂಗ್ಲಿಷ್ ಕಂಠಪಾಠ ಸ್ಪರ್ಧೆಯಲ್ಲಿ ಇದೇ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಕೀರ್ತನಾ ತೃತೀಯ ಬಹುಮಾನ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಬಹುಮಾನಿತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು. ಶಿಕ್ಷಕರಾದ ಮಹದೇವಪ್ಪ, ಜಗದೀಶ್, ಭೀಮೇಶ್ ಇದ್ದರು. 



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು