ಫಾಸ್ಟ್ ಫುಡ್, ಹೋಟೆಲ್‍ಗಳ ಮೇಲೆ ಆರೋಗ್ಯಾಧಿಕಾರಿಗಳ ದಾಳಿ

ನಿಷೇಧಿತ ಬಣ್ಣ, ಟೇಸ್ಟಿಂಗ್ ಪೌಡರ್ ಬಳಕೆಗೆ ದಂಡ

 ವರದಿ-ಶಾರುಕ್ ಖಾನ್, ಹನೂರು 

ಹನೂರು : ತಾಲ್ಲೂಕಿನ ಬಂಡಳ್ಳಿ ಗ್ರಾಮದ ವಿವಿಧೆಡೆ ಅಂಗಡಿಗಳು, ಹೋಟೆಲ್‍ಗಳ ಮೇಲೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಪ್ರಕಾಶ್ ನೇತೃತ್ವದ ತಂಡ ದಾಳಿ ನಡೆಸಿ ಹೋಟೆಲ್ ಮಾಲೀಕರಿಗೆ ದಂಡ ವಿಧಿಸುವ ಮೂಲಕ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ.
ಆಹಾರದಲ್ಲಿ ಅತಿಯಾದ ಬಣ್ಣ, ಟೇಸ್ಟಿಂಗ್ ಸಾಲ್ಟ್ ಬಳಕೆ ಮಾಡುವುದು.  ಸ್ವಚ್ಛತೆ ಕಾಪಾಡಿಕೊಳ್ಳದಿರುವುದು. ಹೀಗೆ ಅನೇಕ ವಿಷಯಗಳ ಬಗ್ಗೆ ಪರಿಶೀಲಿಸಲು ವಿವಿಧ ಹೋಟೆಲ್‍ಗಳ ಮೇಲೆ  ಧಾಳಿ ನೆಡೆಸಲಾಯಿತು.
ನಂತರ ಆರೋಗ್ಯಾಧಿಕಾರಿಗಳು ಕರಿದ ಎಣ್ಣೆ ಮರುಬಳಿಕೆ ಪುನಹ ಮಾಡಿದಲ್ಲಿ ಹೋಟೆಲ್ ಮುಚ್ಚಿಸುವ ಎಚ್ಚರಿಕೆ ನೀಡಿ ದಂಡ ವಿಧಿಸಿದರು. 
ಕೆಲ ಅಂಗಡಿಗಳಲ್ಲಿ ಕೋಟ್ಪಾ-ಕಾಯ್ದೆ ಅನ್ವಯ ನಾಮಫಲಕ ಅಳವಡಿಸದೇ ಇದ್ದುದ್ದನ್ನು ಗಮನಿಸಿ ಅವರಿಗೂ ದಂಡದ ಬಿಸಿ ತೋರಿಸಲಾಯಿತು.
ಆರೋಗ್ಯ ಇಲಾಖೆಯ ನಿಂಬೇಸ್, ಶಿಕ್ಷಣ ಇಲಾಖೆಯ ದೈಹಿಕ ಪರಿವೀಕ್ಷಕ ಮಹದೇವ್, ಪಿಡಿಒ ರಾಜು, ಪೊಲೀಸ್ ಪೇದೆ ಕೃಷ್ಣ, ಬಿಲ್ ಕಲೆಕ್ಟರ್ ವೆಂಕಟಾಚಲ, ಸಂತೋμï, ಬಸವರಾಜು, ಮಂಜುನಾಥ್ ಸೇರಿದಂತೆ ಹಲವರು ಹಾಜರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು