ಮಹಿಳೆಯ ವಿಳಾಸ ತಿಳಿದವರು ಪೊಲೀಸ್ ಠಾಣೆಗೆ ಸಂಪರ್ಕಿಸಲು ಕೋರಿದೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ಮಲೈ ಮಹದೇಶ್ವರ ಮಬೆಟ್ಟದಲ್ಲಿ ನಾಗಮಲೆಗೆ ಹೋಗುವ ರಸ್ತೆ ಹಳೆಯೂರು ಗ್ರಾಮದ ಜಡೇಸ್ವಾಮಿ ದೇವಸ್ಥಾನದ ಹಿಂಭಾಗ ಅಪರಿಚಿತ ವೃದ್ಧೆಯೊಬ್ಬರ ಶವ ಪತ್ತೆಯಾಗಿದೆ. ಈ ಬಗ್ಗೆ ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವೃದ್ಧೆಯ ಮೃತದೇಹವನ್ನು ಚಾಮರಾಜನಗರ ಜಿಲ್ಲಾಸ್ಪತ್ರೆಯ ಶೈತ್ಯಗಾರದಲ್ಲಿರಿಸಲಾಗಿದೆ. ಮಹಿಳೆಯ ಪರಿಚಯ ಇದ್ದವರು ಆಕೆಯ ವಿಳಾಸ ತಿಳಿಸುವಂತೆ ಪೋಲಿಸರು ತಿಳಿಸಿದ್ದಾರೆ. ಮಲೈ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ಫೋನ್ ನಂ: 08225272141, 9480804658ಗೆ ಸಂಪರ್ಕಿಸಲು ಕೋರಿದೆ.
0 ಕಾಮೆಂಟ್‌ಗಳು