ಹನೂರು ಬಳಿಯ ಎಲ್ಲೆಮಾಳದಲ್ಲಿ ಘಟನೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಎಲ್ಲೇಮಾಳ ಗ್ರಾಮದಲ್ಲಿ ಬುಧವಾರ ಸಂಜೆ ಸುರಿದ ಬಿರುಗಾಳಿ ಮಳೆಗೆ ಕೌದಳ್ಳಿ-ಮಲೆ ಮಹದೇಶ್ವರ ಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಎಲ್ಲೇಮಾಳ ಗ್ರಾಮದ ನೇಸರ ಶಾಲೆಯ ಮುಂಭಾಗದ ಮುಖ್ಯ ರಸ್ತೆ ಮಧ್ಯದಲ್ಲಿ ಮರವೊಂದು ಉರುಳಿದ್ದು ವಾಹನ ಸಂಚಾರಕ್ಕೆ ಕೆಲಕಾಲ ಅಡ್ಡಿ ಉಂಟುಮಾಡಿತ್ತು.
ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಉಂಟಾಗಿಲ್ಲ. ತಕ್ಷಣ ಎಚ್ಚೆತ್ತ ಸ್ಥಳೀಯರು ಮರದ ರಂಬೆ, ಕೊಂಬೆಗಳನ್ನು ಕಡಿದು ಸಂಚಾರಕ್ಕೆ ಅನುವು ಮಾಡಿ ಸಮಯ ಪ್ರಜ್ಞೆ ಮೆರೆದರು. ಮಹದೇಶ್ವರಬೆಟ್ಟ ಹಾಗೂ ಹನೂರು ಪಟ್ಟಣದತ್ತ ಆಗಮಿಸುತ್ತಿದ್ದ ವಾಹನಗಳು ಕೆಲಕಾಲ ಸಾಲುಗಟ್ಟಿ ನಿಂತ ದೃಶ್ಯ ಕಂಡು ಬಂತು.