ಕಳ್ಳಬಟ್ಟಿ ತಯಾರಿಕೆ ಅಡ್ಡೆ ಮೇಲೆ ದಾಳಿ 18 ಲೀಟರ್ ಕಳ್ಳಬಟ್ಟಿ ಕೊಳೆ ವಶ

ರಾಮಾಪುರ ಪೊಲೀಸರ ಕಾರ್ಯಾಚರಣೆ 


 ವರದಿ-ಶಾರುಕ್ ಖಾನ್, ಹನೂರು 
ಹನೂರು : ತಾಲ್ಲೂಕಿನ ದಿನ್ನಳ್ಳಿ ಪಂಚಾಯಿತಿ ವ್ಯಾಪ್ತಿಯ ಹುಣಸೆ ಮರದ ದೊಡ್ಡಿ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಮಹಿಳೆಯೊಬ್ಬರನ್ನು ಬಂಧಿಸಿ ಕಳ್ಳಬಟ್ಟಿ ತಯಾರಿಸಲು ಸಂಗ್ರಹಿಸಿದ್ದ 18 ಲೀಟರ್ ಕಳ್ಳಬಟ್ಟಿ ಕೊಳೆಯನ್ನು ವಶಪಡಿಸಿಕೊಂಡಿದ್ದಾರೆ.
ಗ್ರಾಮದ ಸರಸಿ ಬಾಯಿ ಆರೋಪಿ ಮಹಿಳೆ. ಈಕೆ ತನ್ನ ಮನೆಯಲ್ಲಿ ಕಳ್ಳಭಟ್ಟಿ ತಯಾರಿಸಲು ಕೊಳೆಯನ್ನು ಸಂಗ್ರಹಿಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ರಾಮಾಪುರ ಠಾಣೆಯ ಪೊಲೀಸರು ದಾಳಿ ನಡೆಸಿ ಮಾಲನ್ನು ವಶಕ್ಕೆ ಪಡೆದು ಆರೋಫಿಯನ್ನು ಠಾಣಾ ಜಾಮೀನಿನ ಮೇಲೆ ಬಿಟ್ಟಿದ್ದಾರೆ.  
ಇನ್ಸ್‍ಪೆಕ್ಟರ್ ನಂಜುಂಡಸ್ವಾಮಿ ಮಾರ್ಗದರ್ಶನದಲ್ಲಿ ಸಬ್ ಇನ್ಸ್‍ಪೆಕ್ಟರ್ ಮಂಜುನಾಥ್ ಪ್ರಸಾದ್ ಹಾಗೂ ಸಿಬ್ಬಂದಿಗಳಾದ ಮುಖ್ಯ ಪೇದೆಗಳಾದ ನಾಗೆಂದ್ರ, ನಾಗಶೆಟ್ಟಿ, ಪೇದೆ ಮಹೇಂದ್ರ ಮಹಿಳಾ ಪೇದೆ ಇಂದ್ರಾಣಿ ರವರು ದಾಳಿಯಲ್ಲಿ ಪಾಲ್ಗೊಂಡಿದ್ದರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು