ನಾಲೆಗೆ ಸ್ಲ್ಯಾಬ್ ನಿರ್ಮಿಸಲು ನರೀಪುರ ಗ್ರಾಮಸ್ಥರಿಂದ ಬಿಜೆಪಿ ಮುಖಂಡ ವೆಂಕಟೇಶ್‍ಗೆ ಮನವಿ
ಅಕ್ಟೋಬರ್ 17, 2022
ಶೀಘ್ರದಲ್ಲೇ ಸ್ಲ್ಯಾಬ್ ನಿರ್ಮಿಸುವ ಭರವಸೆ ನೀಡಿದ ವೆಂಕಟೇಶ್
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ನರೀಪುರ ಗ್ರಾಮದ ಸರ್ಕಾರಿ ಶಾಲೆಯ ಮುಂಭಾಗದಲ್ಲಿರುವ ನಾಲೆಗೆ ಪೂರ್ಣ ಪ್ರಮಾಣದ ಕಾಂಕ್ರೀಟ್ ಸ್ಲ್ಯಾಬ್ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ಬಿಜೆಪಿ ಮುಖಂಡ ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು. ಪಟ್ಟಣದ ಬಿಜೆಪಿ ಮುಖಂಡ ವೆಂಕಟೇಶ್ ಅವರ ಕಚೇರಿಗೆ ಆಗಮಿಸಿದ ನರೀಪುರ ಗ್ರಾಮದ ಮುಖಂಡರು ಮಾತನಾಡಿ, ಗ್ರಾಮದ ಸರ್ಕಾರಿ ಶಾಲೆ ಮುಂಭಾಗದಲ್ಲಿರುವ ಚಾನಲ್‍ಗೆ ಭದ್ರವಾದ ಸೇತುವೆ ಇಲ್ಲದ ಕಾರಣ ಮಕ್ಕಳು ಚಾನಲ್ ದಾಟಿಕೊಂಡು ಶಾಲೆಗೆ ಹೋಗಬೇಕಿದೆ. ಇದರಿಂದ ಮಕ್ಕಳು ಕಾಲು ಜಾರಿ ನಾಲೆಗೆ ಬೀಳುವ ಅಪಾಯ ಇರುವುದರಿಂದ ಈ ಬಗ್ಗೆ ಹಲವಾರು ಬಾರಿ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತಾವು ಪೂರ್ಣ ಪ್ರಮಾಣದ ಸ್ಲ್ಯಾಬ್ ನಿರ್ಮಿಸಿಕೊಡುವಂತೆ ಗ್ರಾಮಸ್ಥರು ವೆಂಕಟೇಶ್ ಅವರಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಬಿಜೆಪಿ ಮುಖಂಡ ವೆಂಕಟೇಶ್, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರಲ್ಲದೇ, ಇದಕ್ಕಾಗಿ ವೈಯಕ್ತಿಕವಾಗಿಯೂ ನೆರವು ನೀಡುವುದಾಗಿ ಹೇಳಿದರು.
0 ಕಾಮೆಂಟ್‌ಗಳು