ವಿಶ್ವ ವಿಖ್ಯಾತ ಮೈಸೂರು ಅರಮನೆ ಕೋಟೆಯ ಗೋಡೆ ಕುಸಿತ

ಕೋಟೆ ರಕ್ಷಣೆಗೆ ಅರಮನೆ ಮಂಡಳಿ, ಜಿಲ್ಲಾಡಳಿತ ನಿರ್ಲಕ್ಷ್ಯ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ಅರಮನೆಯ ರಕ್ಷಣೆಗಾಗಿ ನಿರ್ಮಿಸಿದ್ದ ಕೋಟೆಯ ಗೋಡೆ ಕುಸಿದಿದೆ. ಕೋಟೆ ಮಾರಮ್ಮ ದೇಗುಲ ಹಾಗೂ ಜಯಮಾತಾರ್ಂಡ ದ್ವಾರದ ನಡುವಿನ ಕೋಟೆಯ ಗೋಡೆ ಕೆಲ ದಿನಗಳಿಂದ ಶಿಥಿಲಾವಸ್ಥೆಯಲ್ಲಿತ್ತು. ಮಳೆಯ ಆರ್ಭಟಕ್ಕೆ ಈಗ ಕುಸಿದಿದೆ. 
ಮೈಸೂರು ಅರಮನೆಯ ಸುತ್ತಲೂ ನಿರ್ಮಾಣ ಮಾಡಿರುವ ಕೋಟೆಗೆ ದೊಡ್ಡ ಇತಿಹಾಸವಿದೆ. ಅಂದಿನ ಅರಸರ ಕಾಲದಲ್ಲಿ ಅರಮನೆಯ ರಕ್ಷಣೆಗಾಗಿ ನಿರ್ಮಿಸಲಾಗಿದ್ದ ಈ ಆಕರ್ಷಕ ಕೋಟೆಯನ್ನು ಶತ್ರುಗಳ ದಾಳಿಯಿಂದ ರಕ್ಷಣೆ ಪಡೆಯಲು ನಿರ್ಮಿಸಲಾಗಿತ್ತು.
ನಿರಂತರ ಮಳೆಗೆ ಅರಮನೆಯ ಕೋಟೆ ಕುಸಿಯುವ ಹಂತ ತಲುಪಿತ್ತು. ಕೋಟೆ ದುರಸ್ತಿಗೆ ಅರಮನೆ ಮಂಡಳಿ, ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿದ ಕಾರಣ ಇದೀಗ ಕೋಟೆ ಕುಸಿದು ಬಿದ್ದಿದೆ.