ಜಾತಿ ನಿಂದನೆ ಮಾಡಿರುವ ಪಿರಿಯಾಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್ ಬಂಧನಕ್ಕೆ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಒತ್ತಾಯ

ವರದಿ-ಕೆ.ಎಸ್.ಪ್ರಕಾಶ್ ಪಿರಿಯಾಪಟ್ಟಣ

ಪಿರಿಯಾಪಟ್ಟಣ : ಉತ್ತಮ ಪ್ರಜೆಗಳನ್ನು ನಾಡಿಗೆ ಕೊಡುಗೆ ನೀಡಬೇಕಾದ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ್ ಅವರು ಜಾತಿ ನಿಂದನೆ ಮೂಲಕ ಅಸ್ಪøಶ್ಯತೆ ಆಚರಣೆಗೆ ಮುಂದಾಗಿದ್ದು ಖಂಡನಾರ್ಹ. ಕೂಡಲೇ ಅವರನ್ನು ಪೊಲೀಸರು ಬಂಧಿಸಬೇಕೆಂದು ಒತ್ತಾಯಿಸಿ ಟಿ.ಈರಯ್ಯ ನೇತೃತ್ವದಲ್ಲಿ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. 
ಪಟ್ಟಣದ ಆಡಳಿತ ಭವನದ ಮುಂಭಾಗ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಗುರುವಾರ ನಡೆಸಿದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಿರಿಯಾಪಟ್ಟಣ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮತ್ತು ಇವರ ಜೀಪ್ ಚಾಲಕ ಶರೀಫ್ ಫೋನ್ ಸಂಭಾಷಣೆ ನಡೆಸುವಾಗ ಹಣಕಾಸಿನ ವಿಷಯ ಮತ್ತು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಸಿ.ಎಂ.ಶಿವಯ್ಯನ ಬಗ್ಗೆ ಮತ್ತು ಇಡೀ ಜನಾಂಗದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದಲ್ಲದೆ ಜಾತಿ ನಿಂದನೆ ಮಾಡಿ ಬಾಯಿಗೆ ಬಂದಂತೆ ಮಾತನಾ ಡಿದ್ದಾರೆ.
ಈ ಸಂಭಾಷಣೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬಗ್ಗೆ ಕರ್ನಾಟಕ ದಲಿತ ಚಳುವಳಿ ನವ ನಿರ್ಮಾಣ ವೇದಿಕೆ ಮುಖಂಡರುಗಳು ಮತ್ತು ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಸಿ.ಎಂ.ಶಿವಯ್ಯ ರವರು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ಕಳೆದ ಮಂಗಳವಾರ ದೂರು ನೀಡಿದ್ದರು. ಎರಡು ದೂರುಗಳ ಪೈಕಿ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕ ಸಿ.ಎಂ. ಶಿವಯ್ಯ ರವರ ದೂರನ್ನು ಪರಿಗಣಿಸಿ ಎಸ್ಸಿ,ಎಸ್ಟಿ ದೌರ್ಜನ್ಯ ಕಾಯ್ದೆ ಅಡಿಯಲ್ಲಿ ಜಾತಿ ನಿಂದನೆ ಪ್ರಕರಣವನ್ನು ದಾಖಲಿಸಲಾಗಿದೆ.
ಆದರೆ ದೂರು ದಾಖಲು ಮಾಡಿ ಎರಡು ದಿನ ಕಳೆದರೂ ಸಹ ಕಾನೂನು ಯಾವುದೇ ಕ್ರಮ ಕೈಗೊಂಡಿಲ್ಲ. ಕಾನೂನಿಗೆ ಕನಿಷ್ಠ ಗೌರವವನ್ನು ನೀಡಿಲ್ಲ. ಪೊಲೀಸ್ ಮತ್ತು ಶಿಕ್ಷಣ ಇಲಾಖೆಗಳು ಬಾರಿ ನಿರ್ಲಕ್ಷ ವಹಿಸಿವೆ ಎಂದು ದೂರಿದರು.
ಶಾಂತಿ ಮತ್ತು  ಸೌಹಾರ್ದತೆಗೆ  ಹೆಸರಾದ ಪಿರಿಯಪಟ್ಟಣ ತಾಲೂಕಿನಲ್ಲಿ ಇಂತಹ ಅಧಿಕಾರಿಗಳು ಇದ್ದು ನೌಕರರಲ್ಲಿ ಜಾತಿ ಸಮಸ್ಯೆ ಹುಟ್ಟುಹಾಕುತ್ತಿರುವದರಿಂದ ಶಾಸಕರು ಇಂತಹ ಅಧಿಕಾರಿಗಳು ನಮ್ಮ ತಾಲ್ಲೂಕಿಗೆ ಬಾರದಂತೆ ನೋಡಿಕೊಳ್ಳಬೇಕು ಎಂದು ಮನವಿ ಮಾಡಿದರು.
ಮುಖಂಡರಾದ ಸೀಗೂರು ವಿಜಯ್ ಕುಮಾರ್. ಪಿ.ಮಹದೇವ್. ಮಾತನಾಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜು ಮತ್ತು ಜೀಪ್ ಚಾಲಕ ಶರೀಫನನ್ನು ಕೂಡಲೆ ಬಂಧಿಸುವಂತೆ ಆ ಗ್ರಹಿಸಿದರು, 
ನಂತರ ಪ್ರತಿಭಟನಾಕಾರರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಶಿರಸ್ತೆದಾರ್ ನಂದಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಎಚ್.ಡಿ.ರಮೇಶ್. ಪಿ.ಪಿ.ಪುಟ್ಟನಾಯಕ. ಪಿ.ಪಿ.ಮಹದೇವ್. ಎಂ.ಕೆ. ಕಾಂತರಾಜ್. ರಾಮಣಯ್ಯ. ಎಚ್.ಎಸ್.ಗಣೇಶ್. ಐಚನಹಳ್ಳಿ ಮಂಜು. ಶೇಖರ್. ಬೇಗೂರು ಮಾದೇವ್ ಇತರರಿದ್ದರು.

 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು