ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಸಹಕಾರಿ
ಸೆಪ್ಟೆಂಬರ್ 27, 2022
ಮೈಸೂರಿನ ಪತ್ರಕರ್ತರ ಭವನದಲ್ಲಿ ಕಾಂಗ್ರೆಸ್ ಅತಿ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷÀ ಮಧು ಬಂಗಾರಪ್ಪ ಸುದ್ದಿಗೋಷ್ಠಿ
ಮೈಸೂರು : ದೇಶದಲ್ಲಿ ರೈತರ ಪರಿಸ್ಥಿತಿ ಇಂದು ತೀರಾ ಹದಗೆಟ್ಟಿದೆ, ಗೊಬ್ಬರದ ಬೆಲೆಯೇರಿದೆ. ಜೊತೆಗೆ ಇನ್ನಿತರ ವರ್ಗದ ಜನರು ಸಹಾ ಬೆಲೆಯೇರಿಕೆ, ಭ್ರಷ್ಟಾಚಾರದಿಂದ ಬಳಲುತ್ತಿದ್ದಾರೆ. ಹೀಗಾಗಿ ದೇಶ ಹಾಗೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದಾರೆ ಎಂದು ಕಾಂಗ್ರೆಸ್ ಅತಿ ಹಿಂದುಳಿದ ವರ್ಗ ವಿಭಾಗದ ಅಧ್ಯಕ್ಷರಾದ ಮಧು ಬಂಗಾರಪ್ಪ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ೪೦ ಪರ್ಸೆಟ್ ಕಮಿಷನ್ ಅವ್ಯವಹಾರ ನಡೆಯತ್ತಿದೆ. ಎಲ್ಲ ನೇಮಕಾತಿಗಳಲ್ಲೂ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಈ ಕುರಿತು ವಿರೋಧ ಪಕ್ಷಗಳು ಧ್ವನಿಯೆತ್ತಿದರೂ ಬಿಜೆಪಿ ಅಧಿಕಾರದಲ್ಲಿ ಮುಂದುವರಿದಿದೆ. ಅವರಿಗೆ ಮಾನ ಮರ್ಯಾದೆ ಇಲ್ಲದಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಲೇವಡಿ ಮಾಡಿದರು.
ಜೊತೆಗೆ, ದೇಶವನ್ನು ಜಾತಿ, ಮತ, ಧರ್ಮದ ಆಧಾರದ ಮೇಲೆ ಛಿದ್ರಗೊಳಿಸಿದ್ದಾರೆ. ಹೀಗಾಗಿ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಪಾದಯಾತ್ರೆ ಕೈಗೊಂಡಿದ್ದಾರೆ. ಈ ಪಾದಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿದೆ. ಹಿಂದುಳಿದ ವರ್ಗದವರು, ಅಪಾರ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ರಾಜ್ಯದಾದ್ಯಂತ ಮಾಜಿ ಸಿಎಂ ದಿವಂಗತ ಬಂಗಾರಪ್ಪ ಅವರ ಅಭಿಮಾನಿಗಳು ಇನ್ನೂ ಇದ್ದು, ಇವರನ್ನು ಪಕ್ಷ ಹಾಗೂ ಪಾದಯಾತ್ರೆಗೆ ಸೆಳೆಯುವ ಜವಾಬ್ದಾರಿ ತಾವು ಹೊತ್ತಿರುವುದಾಗಿ ತಿಳಿಸಿದರು.
ಬಳಿಕ, ರೈತರ ಪಂಪ್ ಸೆಟ್‌ಗಳಿಗೆ ಮೀಟರ್ ಹಾಕಿ ಸಿಮ್ ನೀಡುವುದಾಗಿ ಹೇಳುತ್ತಿದ್ದಾರೆ. ರೈತರು ಒಮ್ಮೆ ಒಪ್ಪಿದಲ್ಲಿ ಈ ಹಿಂದೆ ಜನರ ಮೊಬೈಲ್‌ಗಳಿಗೆ ಉಚಿತ ಸಿಮ್ ನೀಡಿ ನಂತರ ಸುಲಿಗೆ ಮಾಡುತ್ತಿರುವ ರೀತಿಯಲ್ಲಿಯೇ ರೈತರು ಒಂದು ಪಂಪ್‌ಸೆಟ್‌ಗೆ ವರ್ಷಕ್ಕೆ ಸುಮಾರು ೬೦ ರಿಂದ ೭೦ ಸಾವಿರ ರೂ. ಪಾವತಿಸಬೇಕಾಗುತ್ತದೆಂದು ಎಚ್ಚರಿಸಿದರು.
ಮಾಜಿ ಶಾಸಕರಾದ ವಾಸು, ನಗರಾಧ್ಯಕ್ಷರಾದ ಆರ್. ಮೂರ್ತಿ, ಗೋವಿಂದರಾಜು, ಶಿವಮಲ್ಲು, ಶಿವಣ್ಣ ಹಾಗೂ ಮಾರುತಿ ಇನ್ನಿತರರು ಹಾಜರಿದ್ದರು.
0 ಕಾಮೆಂಟ್‌ಗಳು