ವರದಿ-ಟಿ.ಬಿ.ಸಂತೋಷ, ಮದ್ದೂರು
ಕೆ.ಎಂ.ದೊಡ್ಡಿ : ಮಂಡ್ಯ ಜಿಲ್ಲೆಯಲ್ಲಿ ಸಿಪಿಎಂ ಪಕ್ಷ ಸಂಘಟನೆ ಹಾಗೂ ಕೂಲಿಕಾರರ ಸಮಸ್ಯೆಗಳ ಅಧ್ಯಯನಕ್ಕಾಗಿ ಮದ್ದೂರು ತಾಲೂಕಿನ ಕೆ.ಎಂ ದೊಡ್ಡಿಗೆ ಆಗಮಿಸಿದ ಸಿಪಿಎಂ ಪಕ್ಷದ ಪಾಲಿಟ್ ಬ್ಯುರೋ ಸದಸ್ಯರಾದ ಬೃಂದಾ ಕಾರಟ್ ಅವರನ್ನು ಕೆ.ಎಂ.ದೊಡ್ಡಿಯ ಸಿಪಿಎಂ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿದರು.
ಕೆ.ಎಂ.ದೊಡ್ಡಿಯ ಭಾರತಿ ಕಾಲೇಜಿನ ಮುಂಭಾಗ ನೂರಾರು ಕಾರ್ಯಕರ್ತರು ಸಿಪಿಎಂ ಪಕ್ಷದ ಭಾವುಟಗಳನ್ನು ಹಿಡಿದು ಬೃಂದಾ ಕಾರಟ್ ಮತ್ತು ಸಿಪಿಎಂ ಪಕ್ಷಕ್ಕೆ ಜಯಕಾರ ಕೂಗಿ ಸ್ವಾಗತಿಸಿದರು
ಈ ಸಂದರ್ಭದಲ್ಲಿ ಬೃಂದಾಕಾರಟ್ ಕೂಲಿಕಾರ ಮಹಿಳೆರೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಅಲಿಸಿದರು. ನಂತರ ಮಹಿಳೆಯರ ಜೀವನಕ್ಕೆ ಪೂರಕವಾಗಿರುವ ವಿಚಾರಗಳ ಬಗ್ಗೆ ಚರ್ಚಿಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾಧ್ಯಕ್ಷ ಎಂ.ಪುಟ್ಟಮಾದು, ಪ್ರಧಾನ ಕಾರ್ಯದರ್ಶಿ ಬಿ.ಹನುಮೇಶ್, ಮದ್ದೂರು ತಾಲೂಕು ಕಾರ್ಯದರ್ಶಿ ಟಿ.ಪಿ.ಅರುಣ್ ಕುಮಾರ್, ಸಿಪಿಎಂ ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ.ಎಲ್.ಕೃಷ್ಣೇಗೌಡ, ಟಿ.ಸಿ.ವಸಂತ, ಪುಟ್ಟಚೆನ್ನಮ್ಮ, ಜಯಮ್ಮ ಮುಂತಾದವರು ಉಪಸ್ಥಿತರಿದ್ದರು.
0 ಕಾಮೆಂಟ್‌ಗಳು