ಭಾನವಿ ಆಸ್ಪತ್ರೆಯಲ್ಲಿ ಶ್ವಾಸಕೋಶ, ಕಣ್ಣು, ಮೂಗು, ಕಿವಿ ಸಮಸ್ಯೆಗಳಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ : ಶ್ವಾಸಕೋಶ ತಜ್ಞ ಡಾ.ಮುರಳಿ ಬಿ.ಕಾಮತ್


 ಮೈಸೂರು : 11ನೇ ವರ್ಷಕ್ಕೆ ಕಾಲಿರಿಸಿರುವ ಕುವೆಂಪುನಗರದ ಭಾನವಿ ಆಸ್ಪತ್ರೆಯಲ್ಲಿ ನೂತನವಾಗಿ ಶ್ವಾಸಕೋಶ, ಕಣ್ಣು, ಮೂಗು, ಕಿವಿ ಸಮಸ್ಯೆಗಳಿಗೆ ಸಂಬಂಧಿಸಿದ ವಿಭಾಗ ಪ್ರಾರಂಭಿಸಿದ್ದು, ಬಡಜನರಿಗೆ ಕೈಗೆಟಕುವ ದರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಶ್ವಾಸಕೋಶ ತಜ್ಞರಾದ ಡಾ.ಮುರಳಿ ಬಿ. ಕಾಮತ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ವಿಭಾಗಗಳಲ್ಲಿ ಅತ್ಯಾಧುನಿಕ ಉಪಕರಣಗಳಿದ್ದು, ದೊಡ್ಡ ದೊಡ್ಡ ಆಸ್ಪತ್ರೆಗೆ ರೋಗಿಗಳು ದುಬಾರಿ ದರ ನೀಡಿ ಹೋಗಬೇಕಾಗಿಲ್ಲ ಎಂದು ತಿಳಿಸಿದರು.

ಅಲ್ಲದೆ, ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಇದೇ ಸೆ.23 ರಂದು ಬೆಳಗ್ಗೆ 10ಕ್ಕೆ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಜೊತೆಗೆ ಕುವೆಂಪುನಗರ ಠಾಣೆಯ ಸಿಬ್ಬಂದಿಗೆ ರೈನ್ ಕೋಟ್ ವಿತರಿಸಲಾಗುವುದೆಂದರು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ.ಎನ್.ವಿಜಯ್ ಚೆಲುವರಾಜ್,  ಪ್ರಧಾನ ವ್ಯವಸ್ಥಾಪಕರಾದ ಆರ್.ಪ್ರಶಾಂತ್, ಡಾ.ಸುಹಾಸ್ ಎನ್.ಪತ್ತಾರ್, ನಿರಂಜನ್ ಸ್ವಾಮಿ ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು