ಹನೂರು : ಸೂಳೇಕೋಬೆ ಗ್ರಾಮದಲ್ಲಿ ಗಾಂಜಾ ವಶ : ಒಬ್ಬನ ಬಂಧನ

ವರದಿ-ಶಾರೂಖ್ ಖಾನ್

ಹನೂರು : ಅಂಗಡಿಯೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ೪೦೦ ಗ್ರಾಂ. ಗಾಂಜಾ ಸೊಪ್ಪನ್ನು ಅಬಕಾರಿ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದು ಸಿದ್ದಮರಿ ಎಂಬ ವ್ಯಕ್ತಿಯೊಬ್ಬನನ್ನು ಬಂಧಿಸಿರುವ ಘಟನೆ ತಾಲೂಕಿನ ಸೂಳೇಕೋಬೆ ಗ್ರಾಮದಲ್ಲಿ ನಡೆದಿದೆ.
ಮೈಸೂರು ವಿಭಾಗದ ಅಬಕಾರಿ ಇಲಾಖೆಯ ಜಂಟಿ ಆಯುಕ್ತರು ಹಾಗೂ ಚಾಮರಾಜನಗರ ಜಿಲ್ಲೆ ಅಬಕಾರಿ ಉಪ ಅಧೀಕ್ಷಕರ ನಿರ್ದೇಶನದಂತೆ ಕೊಳ್ಳೇಗಾಲ ವಲಯ ಅಬಕಾರಿ ನಿರೀಕ್ಷಕರಾದ ಡಿ.ಸುನಿಲ್ ಮಾರ್ಗದರ್ಶನದಲ್ಲಿ ಅಬಕಾರಿ ನಿರೀಕ್ಷಕರಾದ ಸಿದ್ದಯ್ಯ ದಾಳಿ ನಡೆಸಿ ಎನ್‌ಡಿಪಿಎಸ್ ಕಾಯ್ದೆ ರೀತ್ಯಾ ಮೊಕದ್ದಮೆಯನ್ನು ದಾಖಲಿಸಿಕೊಂಡಿದ್ದಾರೆ. 
ಕಾರ್ಯಚರಣೆಯಲ್ಲಿ ಅಬಕಾರಿ ಪೇದೆಗಳಾದ ಎಂ.ಎನ್.ಸುಂದ್ರಪ್ಪ, ಎನ್.ಸುಜನ್ ರಾಜ್ ಹಾಗೂ ವಾಹನ ಚಾಲಕ ಸಿ.ಮಂಜುಪ್ರಸಾದ್ ಭಾಗವಹಿಸಿದ್ದರು.