ಸಸಿ ನೆಡುವ ಮೂಲಕ ದಿ.ಅನಂತ್ ಕುಮಾರ್ ಅವರ 63ನೇ ವರ್ಷದ ಹುಟ್ಟುಹಬ್ಬ ಆಚರಣೆ
ಸೆಪ್ಟೆಂಬರ್ 22, 2022
ಮೈಸೂರು : ಮಾಜಿ ಸಚಿವ ದಿ.ಅನಂತಕುಮಾರ್ ರವರ 63ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಪರಿಸರ ಸ್ನೇಹಿ ಬಳಗದ ವತಿಯಿಂದ ದಸರಾ ವಸ್ತುಪ್ರದರ್ಶದ ಆವರಣದಲ್ಲಿ ಕರ್ನಾಟಕ ವಸ್ತಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ ಗೌಡ ಅವರು ಸಸಿ ನೆಡುವ ಮೂಲಕ "ಹಸಿರು ಉಸಿರು" ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ನಂತರ ಅವರು ಮಾತನಾಡಿ, ಸಸಿಗಳು ಮರಗಳಾಗಿ ಬೆಳೆದು ನಿಂತರೇ ಮಾತ್ರ ಅಭಿವೃದ್ಧಿ ಕಾಣಲು ಸಾಧ್ಯ. ವಸ್ತುಪ್ರದರ್ಶನ ಆವರಣದಲ್ಲಿ ಸಸಿ ನೆಡುವ ಅಭಿಯಾನವನ್ನ ಮುಂದಿನ ದಿನದಲ್ಲಿ ಆಯೋಜಿಸಿ ಪರಿಸರ ಸಂರಕ್ಷಣೆ ಮಾಡಲಾಗುವುದು ಎಂದರು.
ನಗರ ಬಿಜೆಪಿ ಮಹಿಳಾ ಅಧ್ಯಕ್ಷರಾದ ಹೇಮಾ ನಂದೀಶ್ ಮಾತನಾಡಿ, ಅನಂತ್ ಕುಮಾರ್ ರವರು ಸ್ಥಾಪಿಸಿದ ಅದಮ್ಯ ಚೇತನ ಇಂದು ಅವರ ಧರ್ಮಪತ್ನಿ ತೇಜಸ್ವಿನಿ ಅನಂತಕುಮಾರ್ ರವರು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ, ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಅನ್ನದಾಸೋಹ, ಶಿಕ್ಷಣದ ಕಡೆ ಹಚ್ಚಾಗಿ ಒತ್ತು ನೀಡಿರುವುದು ಶ್ಲಾಘನೀಯವಾದುದು. ಕೆರೆ ಕಲ್ಯಾಣಿಗಳ ಜೀರ್ಣೋದ್ದಾರ, ಪ್ಲಾಸ್ಟಿಕ್ ಮುಕ್ತ ಭಾರತ ಮಾಡಬೇಕೆನ್ನುವ ಅವರ ಸಂಕಲ್ಪಕ್ಕೆ ಯುವಪೀಳಿಗೆ ಕೈಜೋಡಿಸಬೇಕಿದೆ ಎಂದರು,
ನಗರಪಾಲಿಕೆ ಸದಸ್ಯ ಜಗದೀಶ್, ಬಿಜೆಪಿ ಮಹಿಳಾ ಮೋರ್ಚಾ ನಗರಾಧ್ಯಕ್ಷೆ ಹೇಮಾ ನಂದೀಶ್, ಅಜಯ್ ಶಾಸ್ತ್ರಿ, ಗಿರೀಶ್, ಪರಮೇಶ್ ಗೌಡ, ಅಪೂರ್ವ ಸುರೇಶ್, ಈರೇಗೌಡ, ಅನೀಲ್, ಕಾರ್ತಿಕ್ ನಾಯಕ್, ಸತ್ಯನಾರಾಯಣ, ಸುಚೀಂದ್ರ, ವಿನಯ್, ಫಣೀಶ್, ಶ್ರೀರಾಮ್, ಸಿದ್ದೇಶ್, ಕಿರಣ್ ಗೌಡ, ಮುಂತಾದವರು ಇದ್ದರು.
0 ಕಾಮೆಂಟ್‌ಗಳು