ಪಾಂಡವಪುರ: ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳಲ್ಲಿ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು ಶುಕ್ರವಾರ ೧.೩೦ ಕೋಟಿ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ಪಾಂಡವಪುರ ತಾಲೂಕಿನ ಕೋಡಹಳ್ಳಿ ಹೊಸೂರು ಗ್ರಾಮದಲ್ಲಿ ೨೫ ಲಕ್ಷ ರೂ., ಟಿ.ಎಸ್.ಛತ್ರ ಗ್ರಾಮದಲ್ಲಿ ೨೫ ಲಕ್ಷ ರೂ., ಸಂಗಾಪುರ ಗ್ರಾಮದಲ್ಲಿ ೪೦ ಲಕ್ಷ ರೂ, ನರಹಳ್ಳಿ ಗ್ರಾಮದಲ್ಲಿ ೨೦ ಲಕ್ಷ ರೂ. ಹಾಗೂ ಮೇನಾಗರ ಗ್ರಾಮದಲ್ಲಿ ೨೦ ಲಕ್ಷ ರೂ. ವೆಚ್ಚದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಅವರು ಭೂಮಿ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ ಅವರು ಮಾತನಾಡಿ, ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವದ ಹೆಚ್ಚುವರಿ ಅನುದಾನ ಹಾಗೂ ಪ್ರವಾಹ ಪೀಡಿತ ಹೆಚ್ಚುವರಿ ಅನುದಾನಗಳನ್ನು ಬಳಸಿ ಮೇಲ್ಕಂಡ ಗ್ರಾಮಗಳಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
ಮೇಲ್ಕಂಡ ಗ್ರಾಮಗಳಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂಬ ಉದ್ದೇಶದಿಂದ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಉಳಿದ ಗ್ರಾಮಗಳ ಅಭಿವೃದ್ಧಿಗೂ ಶ್ರಮಿಸಲಾಗುವುದು ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ನಿವಾರಣೆ
ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಹಲವೆಡೆ ಕುಡಿಯುವ ನೀರಿನ ಸಮಸ್ಯೆಗಳು ಇದೆ. ಈ ಬಗ್ಗೆ ನಿವಾರಣೆ ಮಾಡಲು ಅಧಿಕಾರಿಗಳಿಗೆ ಕ್ರಮವಹಿಸಲು ಸೂಚಿಸಲಾಗಿದೆ.
ವಿವಿಧ ಗ್ರಾಮಗಳಲ್ಲಿ ಕೆಟ್ಟಿರುವ ಶುದ್ದ ಕುಡಿಯುವ ನೀರಿನ ಘಟಕಗಳನ್ನು ರಿಪೇರಿ ಮಾಡಲು ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಬೋರ್ವೆಲ್ಗಳನ್ನು ಕೊರೆಸಿ ಕ್ರಮವಹಿಸಲಾಗುವುದು ಎಂದರು.
ಶೀಘ್ರದಲ್ಲೇ ಬನಘಟ್ಟ ಸೇತುವೆ ಬಳಕೆಗೆ
ಬನಘಟ್ಟ ಬಳಿ ನಿರ್ಮಿಸಿರುವ ಸೇತುವೆ ಕಾಮಗಾರಿ ವೈಜ್ಞಾನಿಕವಾಗಿದೆ ಎಂಬ ವರದಿ ಬಂದಿರುವ ಹಿನ್ನೆಲೆಯಲ್ಲಿ ಶೀಘ್ರವೇ ರಸ್ತೆ ಸರಿಪಡಿಸಿ ಚಾಲನೆ ನೀಡಲಾಗುವುದು. ಜತೆಗೆ ವಿಸಿ ನಾಲೆ ಕಾಮಗಾರಿಯನ್ನು ಸಹ ಆರಂಭಿಸಲಾಗುವುದು ಎಂದರು.
ಡ್ಯಾAಗಳಲ್ಲಿ ನೀರಿನ ಲಭ್ಯತೆ ಮಾಹಿತಿ ಸಂಗ್ರಹ
ಕೆಆರ್ಎಸ್ ಡ್ಯಾಂನಲ್ಲಿ ಇರುವ ನೀರಿನ ಅಗತ್ಯತೆ ಮೇರೆಗೆ ಮುಂದಿನ ದಿನಗಳಲ್ಲಿ ಕ್ರಮವಹಿಸಲಾಗುವುದು, ಈಗಾಗಲೆ ಐಸಿಸಿ ಸಭೆ ನಡೆಸಿ ಚರ್ಚಿಸಲಾಗಿದೆ. ಕೆಆರ್ಎಸ್ ಹಾಗೂ ಹೇಮಾವತಿ ಡ್ಯಾಂ ನಲ್ಲಿರುವ ನೀರಿನ ಮಾಹಿತಿ ಪಡೆಯಲಾಗಿದೆ. ಸದ್ಯದಲ್ಲಿಯೇ ಮಳೆಯಾಗುವ ಮುನ್ಸೂಚನೆ ಇದೆ, ಮಳೆಯಾದರೆ ಸಮಸ್ಯೆ ಇಲ್ಲ, ಇಲ್ಲವಾದರೆ ಕುಡಿಯುವ ನೀರಿಗೆ ಆಧ್ಯತೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೆ.ಹೊಸೂರು ಗ್ರಾಮದ ಮುಖಂಡರಾದ ಮಂಜು, ಸ್ವಾಮೀಗೌಡ, ಮಧು, ಚಲುವೇಗೌಡ, ಪಾಪಣ್ಣ, ನಾಗಣ್ಣ, ಲೋಕೇಶ್, ಶಂಕರನಾರಾಯಣ, ಸಂಗಾಪುರ ಜಗದೀಶ್, ಪ್ರಕಾಶ್, ಸಣ್ಣೇಗೌಡ, ರಮೇಶ್, ವಿಶ್ವ, ಶಂಕರ್, ನರಹಳ್ಳಿ ಗ್ರಾಮದ ಬೋರೇಗೌಡ, ಶಿವಣ್ಣ, ನಂದೀಶ್, ಸ್ವಾಮೀಗೌಡ, ಜಯರಾಮು, ಕುಮಾರ್, ಮರೀಗೌಡ, ಮೇನಾಗರ ಕುಮಾರ್, ಜವರೇಗೌಡ, ಚಲುವರಾಜು ಸೇರಿದಂತೆ ಟಿ.ಎಸ್.ಛತ್ರ ಗ್ರಾಮದ ಮುಖಂಡರು ಕಾರ್ಯಕರ್ತರು ಮುಖಂಡರು ಹಾಜರಿದ್ದರು.





