ಮೈಸೂರು : ರಾಜ್ಯ ಸರ್ಕಾರ ಪ್ರಸ್ತುತ ಭರ್ತಿ ಮಾಡುತ್ತಿರುವ 56437 ಸರ್ಕಾರಿ ಹುದ್ದೆಗಳಲ್ಲಿ ಪರಿಶಿಷ್ಟ ಜಾತಿಗೆ ಕೇವಲ ಶೇ.3 ಮೀಸಲಾತಿ ನಿಗದಿ ಮಾಡಿರುವುದು ಭಾರಿ ಅನ್ಯಾಯ, ಮೀಸಲಾತಿಯನ್ನು ಶೇ.7ಕ್ಕೆ ಹೆಚ್ಚಿಸಬೇಕು, ಹಾಗೂ ಕಾಯ್ದೆಯನ್ನು ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕೆಂದು ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸಂಘಟನೆಗಳ ಒಕ್ಕೂಟದ ದ್ಯಾವಪ್ಪ ನಾಯಕ ಒತ್ತಾಯಿಸಿದರು.
ಜಲದರ್ಶಿನಿ ಅತಿಥಿ ಗೃಹದಲ್ಲಿ ಬುಧವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸಂಘಟನೆಗಳ ಒಕ್ಕೂಟದ ಮೈಸೂರು ವಿಭಾಗ ಮಟ್ಟದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.
ನಮ್ಮ ಸಮುದಾಯದ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದ ಹೋರಾಟದ ಫಲವಾಗಿ ನಮ್ಮ ಸಮುದಾಯಕ್ಕೆ ಶೇ.7 ಮೀಸಲಾತಿ ದೊರಕಿತ್ತು, ರಾಜಕೀಯವಾಗಿ ನಮಗೆ ಶೇ.7 ಮೀಸಲಾತಿ ದೊರಕಿದೆ. ಇದರಿಂದಾಗಿ ನಮ್ಮಲ್ಲಿ 15 ಶಾಸಕರು ಇದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಲ್ಲೂ ಶೇ.7 ಮೀಸಲಾತಿ ದೊರಕಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮಾತ್ರ ನಮಗೆ ಶೇ. 7 ಮೀಸಲಾತಿ ಜಾರಿಯಾಗಿಲ್ಲ, ನಮ್ಮ ಸಮುದಾಯದವರು ಶಿಕ್ಷಣವಂತರಾಗುತ್ತಾರೆ. ಉದ್ಯೋಗ ಪಡೆಯುತ್ತಾರೆ. ಅದನ್ನು ತಡೆಗಟ್ಟಬೇಕು ಎಂಬ ಹುನ್ನಾರವೂ ನಡೆದಿದೆ. ಕೂಡಲೇ ಸರ್ಕಾರ ಪ್ರಸ್ತುತ 56437 ಹುದ್ದೆಗಳ ನೇಮಕಾತಿಯಲ್ಲಿ ಶೇ.7 ಮೀಸಲಾತಿ ನಿಗದಿ ಮಾಡಬೇಕು. ಇದಕ್ಕೂ ಮುನ್ನ ಕಾಯ್ದೆಯನ್ನು ನ್ಯಾಯಾಂಗ ಪರಿಶೀಲನೆಯಿಂದ ರಕ್ಷಿಸಲು ಸಂವಿಧಾನದ 9ನೇ ಪರಿಚ್ಛೇದಕ್ಕೆ ಸೇರಿಸಬೇಕು. ರಾಜ್ಯ ಮತ್ತು ಕೇಂದ್ರ ಸರ್ಕಾರ ನಮ್ಮ ಪರವಾಗಿ ನಿಲ್ಲಬೇಕು. ಇಲ್ಲದೇ ಇದ್ದಲ್ಲಿ ನಮ್ಮ ಸಂಘಟನೆಯಿAದ ಸಭೆ ಕರೆದು ರಾಜ್ಯವ್ಯಾಪಿ ಹೋರಾಟ ನಡೆಸಲಾಗುವುದು ಎಂದು ದ್ಯಾವಪ್ಪ ನಾಯಕ ಎಚ್ಚರಿಕೆ ನೀಡಿದರು.
ಮುಖಂಡರಾದ ಎಸ್.ಆರ್.ನಾಯಕ ಮಾತನಾಡಿ, ಪರಿಶಿಷ್ಟ ಪಂಗಡಗಳ ಹೆಸರಲ್ಲಿ ಸಾಕಷ್ಟು ಜನರು ನಕಲಿ ಪ್ರಮಾಣ ಪತ್ರ ಮಾಡಿಸಿದ್ದಾರೆ. ಸರ್ಕಾರ ಕೂಡಲೇ ಈ ಬಗ್ಗೆ ತನಿಖೆ ನಡೆಸಿ ನಕಲಿ ಪ್ರಮಾಣ ಪತ್ರಗಳನ್ನು ರದ್ದು ಮಾಡಬೇಕು. ಒಂದು ವೇಳೆ ನಕಲಿ ಪ್ರಮಾಣ ಪತ್ರ ಬಳಸಿ ಉದ್ಯೋಗ ಪಡೆದಿದ್ದಲ್ಲಿ ಅವರನ್ನು ವಜಾ ಮಾಡಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳಾದ ಸಿರಿಗೆರೆ ತಿಪ್ಪೇಶ, ತುಮಕೂರು ಶ್ರೀಧರ, ಬೆಂಗಳೂರಿನ ಲಕ್ಷಿö್ಮಪತಿ, ಎಸ್.ಆರ್.ನಾಯಕ, ಮಾರುತಿ ನಾಯಕ, ನಾರಾಯಣಸ್ವಾಮಿ ಮಾಲೂರು, ನಾಗರಾಜು ಅಶ್ವತ್ಥಪ್ಪ, ಬೆಂಗಳೂರು ಕಲಾವತಿ, ವಿಮಲಾವಾಣಿ, ಸುರೇಶ ಕುಮಾರಬೀಡು, ಸಾಯಿರಾಮ್, ರಾಜು, ಕಲ್ಲಹಳ್ಳಿ ಕೃಷ್ಣ, ಹಂಚ್ಯಾ ರವಿ, ದೀಪಿಕಾ, ಪುಟ್ಟರಾಜು ಮುಂತಾದವರು ಇದ್ದರು.

